ಕೋಲಾರ: ಜೈನ್ ವಿಶ್ವವಿದ್ಯಾಲಯದ ಪುರುಷರ ಮತ್ತು ಮಹಿಳೆಯರ ತಂಡಗಳು ಇಲ್ಲಿ ನಡೆದ ಅಖಿಲ ಭಾರತ ಅಂತರ ಕಾಲೇಜು ಆಹ್ವಾನಿತ ‘ಚಿನ್ನದ ನಾಡು ಕಪ್– 2026’ ಬ್ಯಾಸ್ಕೆಟ್ಬಾಲ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡವು.

ಚಿನ್ನದ ನಾಡು ಬ್ಯಾಸ್ಕೆಟ್ಬಾಲ್ ಕ್ಲಬ್ ಆಶ್ರಯದಲ್ಲಿ ನಗರದ ಮಿನಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಪುರುಷರ ವಿಭಾಗದ ಫೈನಲ್ನಲ್ಲಿ ಜೈನ್ ಕಾಲೇಜು ತಂಡವು 79–63ರಿಂದ ಕ್ರೈಸ್ಟ್ ಕಾಲೇಜು ತಂಡವನ್ನು ಸೋಲಿಸಿತು.

ಚಾಂಪಿಯನ್ ಜೈನ್ ತಂಡ ₹1 ಕೋಟಿ ಬಹುಮಾನವನ್ನು ಜೇಬಿಗಿಳಿಸಿತು. ರನ್ನರ್ಸ್ಅಪ್ ಕ್ರೈಸ್ಟ್ ತಂಡ ₹75 ಸಾವಿರ ಬಹುಮಾನ ಪಡೆಯಿತು. ಮೂರನೇ ಸ್ಥಾನ ತಮಿಳುನಾಡಿನ ಪಿಎಸ್ಜಿ ಕಾಲೇಜು ತಂಡದ ಪಾಲಾಯಿತು.

ಮಹಿಳೆಯರ ವಿಭಾಗದ ಫೈನಲ್ನಲ್ಲಿ ಜೈನ್ ವಿ.ವಿ ತಂಡವು 68–55ರಿಂದ ತಮಿಳುನಾಡಿನ ವೈಷ್ಣವ ಕಾಲೇಜು ತಂಡವನ್ನು ಸೋಲಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.