ಕೈರೊ (ಪಿಟಿಐ): ದೀರ್ಘಕಾಲದ ನಂತರ ಕಣಕ್ಕೆ ಮರಳಿದ ಪ್ರಮುಖ ಶೂಟರ್ ಶಿವ ನರ್ವಾಲ್ ಅವರು ಮಂಗಳವಾರ ಇಲ್ಲಿ ಆರಂಭವಾದ ಐಎಸ್ಎಸ್ಎಫ್ ಜೂನಿಯರ್ ವಿಶ್ವಕಪ್ನ ಪುರುಷರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದು ಸಂಭ್ರಮಿಸಿದರು.

ಚಿರಾಗ್ ಶರ್ಮಾ ಅವರು ಇದೇ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದುಕೊಂಡರು. ಮಹಿಳೆಯರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಪನಾ ಭುಗ್ರಾ ಬೆಳ್ಳಿ ಗೆದ್ದುಕೊಂಡರು. ಇದರೊಂದಿಗೆ ಮೊದಲ ದಿನ ಭಾರತ ಮೂರು ಪದಕಗಳನ್ನು ಗೆದ್ದಂತಾಯಿತು.

ಅರ್ಹತಾ ಸುತ್ತಿನ ಉತ್ತಮ ಲಯವನ್ನು ಫೈನಲ್ ಸುತ್ತಿನಲ್ಲೂ ಮುಂದುವರಿಸಿದ ನರ್ವಾಲ್ 241.8 ಸ್ಕೋರ್ ದಾಖಲಿಸಿದರು. ಉಜ್ಬೇಕಿಸ್ತಾನದ ಸೊಡಿಕ್ಜಾನ್ ಅಬ್ದುಲ್ಲೇವ್ 1.8 ಸ್ಕೋರ್ ಅಂತರದಿಂದ ಎರಡನೇ ಸ್ಥಾನ ಗಳಿಸಿದರು. ಚಿರಾಗ್ (218.9) ಮೂರನೇ ಸ್ಥಾನ ಗಳಿಸಿದರು.

ಜೂನಿಯರ್ ಮಹಿಳೆಯರ 10 ಮೀ. ಏರ್ರೈಫಲ್ನಲ್ಲಿ ಫ್ರಾನ್ಸ್ನ ಅನ್ಸಿಲಿನ್ ಬ್ರಾಕ್ಮನ್ (252.0) ಚಿನ್ನ ಗೆದ್ದರೆ, ಪನಾ (250.6) ಬೆಳ್ಳಿ ಮತ್ತು ಫ್ರಾನ್ಸ್ನ ಹೆಲೆನ್ ಎಕೇಲ್ ಕಂಚಿನ ಪದಕ ಗಳಿಸಿದರು. ಅರ್ಹತಾ ಸುತ್ತಿನಲ್ಲಿ ಮೊದಲ ಸ್ಥಾನ ಪಡೆದಿದ್ದ ಭಾರತದ ಶಾಂಭವಿ ಕ್ಷೀರಸಾಗರ ಫೈನಲ್ನಲ್ಲಿ ನಾಲ್ಕನೇ (206.5) ಸ್ಥಾನ ಗಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-51-375494443

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.