ಮಂಗಳವಾರ, 3 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥ್ಲೆಟಿಕ್ಸ್: ಜ್ಯೋತಿ ಯರಾಜಿಗೆ ಚಿನ್ನ

Published 28 ಮೇ 2023, 21:49 IST
Last Updated 28 ಮೇ 2023, 21:49 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರೀಯ ದಾಖಲೆ ಹೊಂದಿರುವ ಭಾರತದ ಜ್ಯೋತಿ ಯರಾಜಿ ಅವರು ಜರ್ಮನಿಯ ವೆನೆಮ್‌ನಲ್ಲಿ ನಡೆದ ‘ಕುರ್ಫಾಲ್ಜ್‌ ಗಲಾ‘ ಅಥ್ಲೆಟಿಕ್ಸ್ ಟೂರ್ನಿಯ 100 ಮೀಟರ್ಸ್ ಹರ್ಡಲ್ಸ್‌ನಲ್ಲಿ ಭಾನುವಾರ ಚಿನ್ನದ ಪದಕ ಜಯಿಸಿದರು.

ಜ್ಯೋತಿ ಅವರು ಸ್ಪರ್ಧೆಯನ್ನು 12.84 ಸೆಕೆಂಡುಗಳಲ್ಲಿ ಕೊನೆಗೊಳಿಸಿದರು. ಇದರೊಂದಿಗೆ ವೈಯಕ್ತಿಕ ಎರಡನೇ ಶ್ರೇಷ್ಠ ಸಾಧನೆ ದಾಖಲಿಸಿದರು. ಕಳೆದ ವರ್ಷ 12.82 ಸೆಕೆಂಡುಗಳಲ್ಲಿ ಗುರಿ ತಲುಪಿದ್ದು ಅವರ ರಾಷ್ಟ್ರೀಯ ದಾಖಲೆಯಾಗಿದೆ.

ಪುರುಷರ 200 ಮೀ. ಓಟದಲ್ಲಿ ಭಾರತದ ಅಮ್ಲಾನ್ ಬೊರ್ಗೊಹೈನ್ (20.66 ಸೆ.) ಶನಿವಾರ ಚಿನ್ನದ ಪದಕ ಜಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT