ಮಂಡ್ಯ: ಕರ್ನಾಟಕದ ಈಜು ಸ್ಪರ್ಧಿಗಳು, ಮೊದಲ ಶಾರ್ಟ್ ಕೋರ್ಸ್ ದಕ್ಷಿಣ ವಲಯ ಈಜು ಚಾಂಪಿಯನ್‌ಷಿಪ್‌ನ ಮೊದಲ ದಿನವಾದ ಶುಕ್ರವಾರ ನಿರೀಕ್ಷೆಯಂತೆ ಸಿಂಹಪಾಲು ಪದಕಗಳನ್ನು ಬಾಚಿಕೊಂಡರು.
ಪಿಇಟಿ ಅಕ್ವೆಟಿಕ್ ಸೆಂಟರ್‌ನಲ್ಲಿ ನಡೆಯುತ್ತಿರುವ ಕೂಟದಲ್ಲಿ ಮೊದಲ ದಿನ 38 ಸ್ಪರ್ಧೆಗಳ ಪೈಕಿ 16ರಲ್ಲಿ ಮೊದಲ ಮೂರೂ ಸ್ಥಾನಗಳನ್ನು ಕರ್ನಾಟಕದ ಸ್ಪರ್ಧಿಗಳೇ ಬಾಚಿಕೊಂಡರು. ನಾಲ್ಕು ಸ್ಪರ್ಧೆಗಳಲ್ಲಿ ಮಾತ್ರ ಇತರ ರಾಜ್ಯಗಳ ಸ್ಪರ್ಧಿಗಳು ಮೊದಲ ಸ್ಥಾನ ಪಡೆದರು.
ಬಾಲಕರ ಒಂದನೇ ಗುಂಪು: 50 ಮೀ. ಬಟರ್‌ಫ್ಲೈ: ಶ್ರೀವರ್ಧನ್ ರಾಜಾರಾಮ ಪಾಟೀಲ, ಕಾಲ: 26.65ಸೆ; 100 ಮೀ. ಬ್ರೆಸ್ಟ್‌ಸ್ಟ್ರೋಕ್: ಆಯುಷ್ ಶಿವರಾಜು ಎಂ, ಕಾಲ: 1ನಿ.07.23 ಸೆ.; 100 ಮೀ. ಬ್ಯಾಕ್‌ಸ್ಟ್ರೋಕ್: ರಾಘವ್ ಸ್ವಚಂದಮ್, ಕಾಲ: 59.83 ಸೆ.; 200 ಮೀ. ಫ್ರೀಸ್ಟೈಲ್: ಅನಿಕೇತ್ ಭಟ್ ಅಮಡಿ, ಕಾಲ: 1ನಿ.58.44ಸೆ.; 400 ಮೀ. ವೈಯಕ್ತಿಕ ಮೆಡ್ಲೆ: ಸೂರ್ಯ ಜೆ.ಟಿ, ಕಾಲ: 4ನಿ.42.36 ಸೆ.; 800 ಮೀ. ಫ್ರೀಸ್ಟೈಲ್: ಅನಿಕೇತ್ ಭಟ್, ಕಾಲ:8ನಿ.40.51ಸೆ.
ಎರಡನೇ ಗುಂಪು: 50 ಮೀ. ಬಟರ್‌ಫ್ಲೈ: ನೈತಿಕ್ ಎನ್., ಕಾಲ: 28.33ಸೆ.; 100 ಮೀ. ಬ್ರೆಸ್ಟ್ ಸ್ಟ್ರೋಕ್: ರೇಯಾನ್ಶ್ ಕಾಂತಿ, ಕಾಲ: 1ನಿ.13.46ಸೆ.–1; 100 ಮೀ. ಬ್ಯಾಕ್‌ಸ್ಟ್ರೋಕ್: ಭವ್ಯೇಶ್ ಸಾಯಿ ಚೌಧುರಿ, ಕಾಲ:1ನಿ.04.13ಸೆ., 200 ಮೀ. ಫ್ರೀಸ್ಟೈಲ್: ದಕ್ಷ ಪ್ರಸಾದ್, ಕಾಲ:2ನಿ.06.64 ಸೆ.; 400 ಮೀ. ಮೆಡ್ಲೆ: ಅಥರ್ವ್ ಪಾಲ್ ಸಿಂಗ್ ರಾಠೋಡ್, ಕಾಲ: 5ನಿ.03.45ಸೆ; 400 ಮೀ. ಫ್ರೀಸ್ಟೈಲ್ ರಿಲೆ: ಕರ್ನಾಟಕ, ಕಾಲ: 4ನಿ.23.37ಸೆ.
ಮೂರನೇ ಗುಂಪು: 100 ಮೀ ಬ್ರೆಸ್ಟ್‌ಸ್ಟ್ರೋಕ್: ಸಮರ್ಥ ಭಾರದ್ವಾಜ್, ಕಾಲ: 1ನಿ.27.20ಸೆ.; 100 ಮೀ. ಬ್ಯಾಕ್‌ಸ್ಟ್ರೋಕ್: ಆರಿತ್ ಚಂದ್ರಶೇಖರ್, ಕಾಲ: 1ನಿ.18.08 ಸೆ.; 4x50 ಮೀ. ಫ್ರೀಸ್ಟೈಲ್ ರಿಲೆ: ಕರ್ನಾಟಕ, ಕಾಲ: 2ನಿ.11.83 ಸೆ.
ಬಾಲಕಿಯರು: ಒಂದನೇ ಗುಂಪು: 50 ಮೀ. ಬಟರ್‌ಫ್ಲೈ: ರಿಶಿಕಾ ಎಂ.ಮಂಗ್ಲೆ, ಕಾಲ: 30.03ಸೆ.; 100 ಮೀ. ಬ್ರೆಸ್ಟ್‌ಸ್ಟ್ರೋಕ್: ಸಮನ್ವಿ ಇ.ಎಸ್., ಕಾಲ: 1ನಿ.21.80 ಸೆ.; 100 ಮೀ. ಬ್ಯಾಕ್‌ಸ್ಟ್ರೋಕ್: ಸಿದ್ಧಿ ಜಿ.ಶಾ, ಕಾಲ: 1ನಿ.06.96ಸೆ.; 200 ಮೀ. ಫ್ರೀಸ್ಟೈಲ್: ರಿಶಿಕಾ ಎಂ.ವಿ., ಕಾಲ: 2ನಿ.17.35ಸೆ; 800 ಮೀ. ಫ್ರೀಸ್ಟೈಲ್: ಜನ್ಯಾ ಬಿ.ಎಸ್, ಕಾಲ: 9ನಿ.44.62ಸೆ.; 4x100 ಮೀ. ಫ್ರೀಸ್ಟೈಲ್ ರಿಲೆ: ಕರ್ನಾಟಕ, ಕಾಲ: 4ನಿ.26.29 ಸೆ.
ಎರಡನೇ ಗುಂಪು: 50 ಮೀ. ಬಟರ್‌ಫ್ಲೈ: ಸೋನಾಕ್ಷಿ ಸತ್ಯನಾರಾಯಣ, ಕಾಲ: 31.06 ಸೆ.;100 ಮೀ. ಬ್ರೆಸ್ಟ್‌ಸ್ಟ್ರೋಕ್: ಗಗನಾ ಸಿ.ಎಂ., ಕಾಲ:1ನಿ.20.15 ಸೆ.; 100 ಮೀ. ಬ್ಯಾಕ್‌ಸ್ಟ್ರೋಕ್: ಶ್ರವಣಿ ಜಗನ್ನಾಥನ್, ಕಾಲ: 1ನಿ.11.70 ಸೆ.; 200 ಮೀ ಫ್ರೀಸ್ಟೈಲ್: ಶಮನಿ ಗೌಡ ಎಚ್, ಕಾಲ: 2ನಿ.17.27ಸೆ.; 400 ಮೀ. ವೈಯಕ್ತಿಕ ಮೆಡ್ಲೆ: ಸುಮನ್ವಿ ವಿ. ಕಾಲ: 5ನಿ.38.55ಸೆ.; 4x100 ಮೀ. ಫ್ರೀಸ್ಟೈಲ್ ರಿಲೆ: ಕರ್ನಾಟಕ, ಕಾಲ:4ನಿ.23.37 ಸೆ.
ಮೂರನೇ ಗುಂಪು: 50 ಮೀ. ಬಟರ್‌ಫ್ಲೈ: ಸ್ಮೃತಿ ಮಹೇಶ್, ಕಾಲ: 35.05 ಸೆ.; 100 ಮೀ. ಬ್ರೆಸ್ಟ್‌ಸ್ಟ್ರೋಕ್: ಧೃತಿ ಅಭಿಲಾಷ್, ಕಾಲ: 1ನಿ.30.05 ಸೆ.; 200 ಮೀ. ಫ್ರೀಸ್ಟೈಲ್: ಶರಣ್ಯಾ ಪಿ.ವಿ., ಕಾಲ: 2ನಿ.39.37ಸೆ.; 4x50 ಮೀ. ಫ್ರೀಸ್ಟೈಲ್ ರಿಲೆ: ಕರ್ನಾಟಕ, ಕಾಲ: 2ನಿ.15.10 ಸೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.