ಮಂಗಳೂರಿನ ತಣ್ಣೀರುಬಾವಿ ಬ್ಲೂ ಫ್ಲ್ಯಾಗ್ ಬೀಚ್ನಲ್ಲಿ ನಡೆದ ರಾಷ್ಟ್ರೀಯ ಸರ್ಫಿಂಗ್ ಚಾಂಪಿಯನ್ಷಿಪ್ನಲ್ಲಿ ದೇಶದ ವಿವಿಧ ಭಾಗಗಳಿಂದ ಬಂದಿದ್ದ ಸರ್ಫರ್ಗಳು ಅಲೆಗಳೊಂದಿಗೆ ರೋಚಕ ಸಾಹಸ ಪ್ರದರ್ಶಿಸಿದರು. ಎತ್ತರದ ಅಲೆಗಳು, ವೇಗದ ಗಾಳಿ ಮತ್ತು ಸಮುದ್ರದ ಸವಾಲುಗಳ ನಡುವೆಯೂ ತಮ್ಮ ಕೌಶಲ್ಯ ಮೆರೆದ ಸ್ಪರ್ಧಿಗಳು ಪ್ರೇಕ್ಷಕರ ಮನಸೆಳೆದರು. ಮೂರು ದಿನ ನಡೆದ ಈ ಚಾಂಪಿಯನ್ಷಿಪ್ ಕಡಲತೀರದಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಸಿತು. 18 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಸರ್ಫಿಂಗ್ ಸ್ವಾಮಿ ಫೌಂಡೇಷನ್ನ ಪ್ರದೀಪ್ ಪೂಜಾರ ಪ್ರಶಸ್ತಿ ಗೆದ್ದು ರಾಷ್ಟ್ರಮಟ್ಟದ ಮೊದಲ ಟ್ರೋಫಿಯೊಂದಿಗೆ ಸಂಭ್ರಮಿಸಿದರು. ಚಾಂಪಿಯನ್ಷಿಪ್ನಲ್ಲಿ ಕರ್ನಾಟಕಕ್ಕೆ ಏಕೈಕ ಪ್ರಶಸ್ತಿಯ ಕೊಡುಗೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.