ರಾಯಪುರ: ಕರ್ನಾಟಕದ ರೀತುಶ್ರೀ ಮತ್ತು ನಾಗಿಣಿ ಅವರು ಖೇಲೊ ಇಂಡಿಯಾ ಆದಿವಾಸಿ ಕ್ರೀಡಾಕೂಟದ ಅಥ್ಲೆಟಿಕ್ಸ್ನಲ್ಲಿ ಗುರುವಾರ ತಮ್ಮ ಎರಡನೇ ಚಿನ್ನ ಗೆದ್ದುಕೊಂಡರು. ಆತಿಥೇಯ ಛತ್ತೀಸಗಢ ತಂಡವು ಫೈನಲ್ನಲ್ಲಿ 1–0 ಗೋಲಿನಿಂದ ಜಾರ್ಖಂಡ್ ತಂಡವನ್ನು ಸೋಲಿಸಿ ಮಹಿಳೆಯರ ವಿಭಾಗದ ಫುಟ್ಬಾಲ್ ಚಿನ್ನ ಗೆದ್ದುಕೊಂಡಿತು.

ಛತ್ತೀಸಗಢ ತಂಡದಲ್ಲಿದ್ದ ಏಕೈಕ ಅಂತರರಾಷ್ಟ್ರೀಯ ಆಟಗಾರ್ತಿ ಹಾಗೂ ನಾಯಕಿ ಕಿರಣ್ ಪಿಸ್ದಾ ಗಳಿಸಿದ ಗೋಲು ನಿರ್ಣಾಯಕವಾಯಿತು.

ಜಗದಾಳಪುರದ ಕ್ರೀಡಾ ಪರಿಸರ್ ಸಂಕೀರ್ಣದಲ್ಲಿ ನಡೆಯುತ್ತಿರುವ ಅಥ್ಲೆಟಿಕ್ ಕೂಟದಲ್ಲಿ ಕರ್ನಾಟಕದ ರೀತುಶ್ರೀ 200 ಮೀ. ಓಟವನ್ನು 25.87 ಸೆ.ಗಳಲ್ಲಿ ಕ್ರಮಿಸಿ ಚಿನ್ನ ಗೆದ್ದರು. ಈ ಮೊದಲು ಅವರು 400 ಮೀ. ಓಟದಲ್ಲಿ ವಿಜಯಿಯಾಗಿದ್ದರು.

ಬುಧವಾರ 800 ಮೀ. ಓಟದಲ್ಲಿ ಚಿನ್ನ ಗೆದ್ದಿದ್ದ ನಾಗಿಣಿ 1,500 ಮೀ. ಓಟದಲ್ಲೂ ಮೊದಲಿಗರಾದರು. ಅವರು 4ನಿ.43.87 ಸೆ.ಗಳಲ್ಲಿ ಗುರಿತಲುಪಿದರು. ಕರ್ನಾಟಕ ಒಟ್ಟು 23 ಚಿನ್ನ ಗೆದ್ದಂತಾಗಿದೆ. ಜೊತೆಗೆ 8 ಬೆಳ್ಳಿ, 7 ಕಂಚಿನ ಪದಕ ಸೇರಿದಂತೆ ಒಟ್ಟು 38 ಪದಕಗಳನ್ನು ಬಾಚಿ ಪದಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಶುಕ್ರವಾರ ಈ ಹತ್ತು ದಿನಗಳ ಕ್ರೀಡಾಕೂಟಕ್ಕೆ ತೆರೆ ಬೀಳಲಿದೆ.

ಅಥ್ಲೆಟಿಕ್ಸ್ನಲ್ಲಿ ಹೆಚ್ಚಿನ ಪದಕ ಬಾಚಿರುವ ಒಡಿಶಾ ತಂಡ ಎರಡನೇ ಸ್ಥಾನದಲ್ಲಿದ್ದು, 20 ಚಿನ್ನ, 13 ಬೆಳ್ಳಿ, 21 ಕಂಚಿನ ಪದಕ ಗಳಿಸಿ ಕರ್ನಾಟಕಕ್ಕೆ ಪೈಪೋಟಿ ಒಡ್ಡಿದೆ. ಜಾರ್ಖಂಡ್ (14 ಚಿನ್ನ, 7 ಬೆಳ್ಳಿ, 11 ಕಂಚು) ಮೂರನೇ ಹಾಗೂ ಆತಿಥೇಯ ಛತ್ತೀಸಗಢ (3 ಚಿನ್ನ, 9 ಬೆಳ್ಳಿ, 6 ಕಂಚು) ಒಂಬತ್ತನೇ ಸ್ಥಾನದಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.