ಬೆಂಗಳೂರು: ಕರ್ನಾಟಕದ ಸಂಜನಾ ಎಂ. ರೆಡ್ಡಿ ಅವರು ಪಂಜಾಬ್ನ ಪಟಿಯಾಲದಲ್ಲಿ ಶನಿವಾರ ಆರಂಭವಾದ ಇಂಡಿಯಾ ಓಪನ್ ಥ್ರೋಸ್ ಸ್ಪರ್ಧೆಯ 18 ವರ್ಷದೊಳಗಿನ ಬಾಲಕಿಯರ ಶಾಟ್ಪಟ್ನಲ್ಲಿ ಸ್ವರ್ಣ ಗೆದ್ದುಕೊಂಡರು.

ಮೈಸೂರಿನ ಸಂಜನಾ, 15.80 ಮೀಟರ್ ಎಸೆದು ಮೊದಲಿಗರಾದರು. ಹರಿಯಾಣದ ಆರತಿ (13.22 ಮೀ.) ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.

ಸೀನಿಯರ್ ಮಹಿಳೆಯರ ವಿಭಾಗದಲ್ಲಿ 16.44 ಮೀ. ಎಸೆದ ಯೋಗಿತಾ (ಹರಿಯಾಣ) ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಎರಡು ಬಾರಿಯ ಏಷ್ಯನ್ ಗೇಮ್ಸ್ ಚಾಂಪಿಯನ್ ತಜೀಂದರ್ಪಾಲ್ ಸಿಂಗ್ ಅವರು ಪುರುಷರ ವಿಭಾಗದಲ್ಲಿ ಚಿನ್ನ (20.51 ಮೀ.) ಗೆದ್ದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.