ಇಂದೋರ್: ಕರ್ನಾಟಕ ಮಹಿಳೆಯರ ತಂಡವು ಇಲ್ಲಿ ನಡೆಯುತ್ತಿರುವ 87ನೇ ಯುಟಿಟಿ ಸೀನಿಯರ್ ರಾಷ್ಟ್ರೀಯ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ನ ಸೆಮಿಫೈನಲ್ನಲ್ಲಿ ಸೋಮವಾರ 1–3ರಿಂದ ಆರ್ಬಿಐ ತಂಡದ ವಿರುದ್ಧ ಪರಾಭವಗೊಂಡಿತು.

ಆರ್ಬಿಐ ತಂಡದ ದಿಯಾ ಚಿತಳೆ ಹಾಗೂ ಐಹಿಕಾ ಮುಖರ್ಜಿ ಅವರು ಕ್ರಮವಾಗಿ ಕುಶಿ ವಿಶ್ವನಾಥ್ ಹಾಗೂ ತನಿಷ್ಕಾ ಕಪಿಲ್ ಕಾಲಭೈರವ ವಿರುದ್ಧ ನೇರ ಸೆಟ್ಗಳಲ್ಲಿ ಗೆಲುವು ಸಾಧಿಸಿದರು. ಕರ್ನಾಟಕದ ತೃಪ್ತಿ ಪುರೋಹಿತ್ ಅವರು 3–2ರಿಂದ ನಿಖತ್ ಬಾನು ಅವರನ್ನು ಮಣಿಸಿ, ಅಂತರವನ್ನು 2–1ಕ್ಕೆ ಇಳಿಸಿದರು. ಆದರೆ, ರಿವರ್ಸ್ ಪಂದ್ಯದಲ್ಲಿ ದಿಯಾ ಅವರು 3–1ರಿಂದ ತನಿಷ್ಕಾ ಅವರನ್ನು ಸೋಲಿಸಿದರು.

ಇದಕ್ಕೆ ಮೊದಲು ನಡೆದ ಎಂಟರ ಘಟ್ಟದ ಪಂದ್ಯದಲ್ಲಿ ಕರ್ನಾಟಕ ತಂಡವು 3–1ರಿಂದ ತಮಿಳುನಾಡು ವಿರುದ್ಧ ಗೆಲುವು ಸಾಧಿಸಿತ್ತು.

ಆರ್ಬಿಐ ತಂಡವು ಪ್ರಶಸ್ತಿ ಸುತ್ತಿನಲ್ಲಿ ಪೆಟ್ರೋಲಿಯಂ ಸ್ಪೋರ್ಟ್ಸ್ ಪ್ರೊಮೋಷನ್ ಬೋರ್ಡ್ (ಪಿಎಸ್ಪಿಬಿ) ತಂಡವನ್ನು ಎದುರಿಸಲಿದೆ. ಪಿಎಸ್ಪಿಬಿ ಆಟಗಾರ್ತಿಯರು ಇನ್ನೊಂದು ಸೆಮಿಫೈನಲ್ನಲ್ಲಿ 3–0ಯಿಂದ ಉತ್ತರ ಪ್ರದೇಶ ತಂಡದ ವಿರುದ್ಧ ನಿರಾಯಾಸವಾಗಿ ಗೆಲುವು ಸಾಧಿಸಿದರು.

ಪುರುಷರ ವಿಭಾಗದಲ್ಲಿ ರೈಲ್ವೇಸ್, ತೆಲಂಗಾಣ, ಪಶ್ಚಿಮ ಬಂಗಾಳ ಹಾಗೂ ಪಿಎಸ್ಪಿಬಿ ತಂಡಗಳು ಸೆಮಿಫೈನಲ್ ಪ್ರವೇಶಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.