ರಾಯಪುರ: ಕರ್ನಾಟಕದ ಮಣಿಕಂಠ ಎಲ್. ಅವರು ಮೊತ್ತಮೊದಲ ಖೇಲೊ ಇಂಡಿಯಾ ಆದಿವಾಸಿ ಕ್ರೀಡೆಗಳ ಈಜು ಸ್ಪರ್ಧೆಯಲ್ಲಿ ಗುರುವಾರ ಮೂರನೇ ಚಿನ್ನದ ಪದಕ ಗೆದ್ದುಕೊಂಡರು. ಕರ್ನಾಟಕಕ್ಕೆ ಸ್ಪರ್ಧೆ ಒಡ್ಡುತ್ತಿರುವ ಒಡಿಶಾದ ಅಂಜಲಿ ಮುಂಡಾ ಈಜುಕೊಳದಲ್ಲಿ ಎರಡನೇ ಚಿನ್ನ ಹೆಕ್ಕಿದರು.

ಆತಿಥೇಯ ಛತ್ತೀಸಗಢದ ಅನುಷ್ಕಾ ಭಗತ್ ಎರಡನೇ ಬೆಳ್ಳಿ ಗೆದ್ದು ತವರು ರಾಜ್ಯಕ್ಕೆ ಸಮಾಧಾನ ಮೂಡಿಸಿದರು. ಕೂಟದ ಮೊದಲ ದಿನವಾದ ಬುಧವಾರ 100 ಮೀ. ಬ್ರೆಸ್ಟ್ ಸ್ಟ್ರೋಕ್ ಮತ್ತು 50 ಮೀ. ಬಟರ್ಫ್ಲೈ ಸ್ಪರ್ಧೆಗಳಲ್ಲಿ ಮೊದಲ ಸ್ಥಾನ ಪಡೆದಿದ್ದ ಮಣಿಕಂಠ ಅವರು 200 ಮೀ. ವೈಯಕ್ತಿಕ ಮೆಡ್ಲೆ ರೇಸ್ಅನ್ನು 2ನಿ.25.93 ಸೆ.ಗಳಲ್ಲಿ ಪೂರೈಸಿ ಚಿನ್ನದ ಪದಕಗಳ ಹ್ಯಾಟ್ರಿಕ್ ಪೂರೈಸಿದರು. ಈ ಸ್ಪರ್ಧೆಯನ್ನು ಅವರು ಅಧಿಕಾರಯುತವಾಗಿ ಗೆದ್ದರು.

ತ್ರಿಪುರದ ರಿಯಾಜ್ (2:34.04 ಸೆ.) ಮತ್ತು ಕಾನ್ಹು ಸೊರೆನ್ (2:36.21 ಸೆ.) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.

ಅಂಜುಲಿ ಮುಂಡಾ ಮಹಿಳೆಯರ 200 ಮೀ. ವೈಯಕ್ತಿಕ ಮೆಡ್ಲೆ (2:53.82 ಸೆ.) ಸ್ಪರ್ಧೆಯಲ್ಲಿ ಚಿನ್ನ ಗೆದ್ದರು. ಮೊದಲ ದಿನ ಅವರು 200 ಮೀ. ಫ್ರೀಸ್ಟೈಲ್ನಲ್ಲಿ ಜಯಶಾಲಿಯಾಗಿದ್ದರು.

ಕರ್ನಾಟಕ ಈಜಿನಲ್ಲಿ ಆರು ಚಿನ್ನ, ಎರಡು ಬೆಳ್ಳಿ ಗೆದ್ದಂತಾಗಿದೆ. ಒಡಿಶಾ (3 ಚಿನ್ನ, 1 ಬೆಳ್ಳಿ, 4 ಕಂಚು) ಎರಡನೇ ಸ್ಥಾನದಲ್ಲಿದೆ.

ವೇಟ್ಲಿಫ್ಟಿಂಗ್ನಲ್ಲಿ ಅಸ್ಸಾಮಿನ ಮೋನಿಕಾ ಸೊನೊವಾಲ್ ಮಹಿಳೆಯರ 48 ಕೆ.ಜಿ ವಿಭಾಗದಲ್ಲಿ ಒಟ್ಟು 132 ಕೆ.ಜಿ. ಭಾರ ಎತ್ತಿ ಚಿನ್ನ ಗೆದ್ದರೆ, ಪುರುಷರ 60 ಕೆ.ಜಿ. ವಿಭಾಗದಲ್ಲಿ ಮಿಜೋರಾಮ್ನ ಐಸಾಕ್ ಮಲ್ಸಾಮ್ತ್ಲುಂಗ ಪ್ರಾಬಲ್ಯ ಮೆರೆದರು. ಸ್ನಾಚ್ ಮತ್ತು ಕ್ಲೀನ್ ಆ್ಯಂಡ್ ಜರ್ಕ್ನಲ್ಲಿ ಒಟ್ಟು 228 ಕೆ.ಜಿ. ಭಾರ ಎತ್ತಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.