ನಾಪೋಕ್ಲು (ಕೊಡಗು ಜಿಲ್ಲೆ): ಕುಲ್ಲೇಟಿರ ಮತ್ತು ಚೆಪ್ಪುಡಿರ ತಂಡಗಳು ಇಲ್ಲಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೇನಂಡ ಕೊಡವ ಕೌಟುಂಬಿಕ ಹಾಕಿ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿವೆ.

ಫೈನಲ್ ಹಣಾಹಣಿ ಶನಿವಾರ (ಮೇ 2) ನಡೆಯಲಿದೆ.

ಗುರುವಾರ ನಡೆದ ಸೆಮಿಫೈನಲ್ಸ್ ಪಂದ್ಯಗಳಲ್ಲಿ ಚೆಪ್ಪುಡಿರ ತಂಡವು 4–3ರ ಅಂತರದಿಂದ ಪರದಂಡ ತಂಡವನ್ನು ಮಣಿಸಿತು. ಮತ್ತೊಂದು ಸೆಮಿಫೈನಲ್ಸ್ ಪಂದ್ಯವು ಪಳಂಗಡ–ಕುಲ್ಲೇಟಿರ ನಡುವೆ ರೋಚಕವಾಗಿ ನಡೆಯಿತು. ಈ ತಂಡಗಳು ತಲಾ 2 ಗೋಲು ಗಳಿಸಿ ಸಮಬಲ ಸಾಧಿಸಿದವು. ಅಂತಿಮವಾಗಿ ಟೈಬ್ರೇಕರ್ನಲ್ಲಿ 2–1ರಿಂದ ಕುಲ್ಲೇಟಿರ ಗೆದ್ದು ಫೈನಲ್ ಕದ ತಟ್ಟಿತು.

ಮಹಿಳಾ 5ಎ ಹಾಕಿ; ಕೇಚೆಟ್ಟಿರ ಚಾಂಪಿಯನ್: ಕಂಬೀರಂಡ– ಕೇಚೆಟ್ಟಿರ ತಂಡಗಳ ನಡುವೆ ನಡೆದ ಮಹಿಳಾ 5ಎ ಹಾಕಿ ಟೂರ್ನಿಯ ಫೈನಲ್ ಪಂದ್ಯವೂ ರೋಚಕವಾಗಿತ್ತು. ಟೈಬ್ರೇಕರ್ನಲ್ಲಿ ಕೇಚೆಟ್ಟಿರ 2–1ರಿಂದ ಗೆಲುವು ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-51-1634920958

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.