ನವದೆಹಲಿ: ಭಾರತದ ಗ್ರ್ಯಾಂಡ್ಮಾಸ್ಟರ್ ಕೋನೇರು ಹಂಪಿ ಅವರು ಸೈಪ್ರಸ್ನಲ್ಲಿ ಈ ತಿಂಗಳ ಕೊನೆಯಲ್ಲಿ ಆರಂಭವಾಗುವ ಪ್ರತಿಷ್ಠಿತ ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ಆಡುವುದಕ್ಕೆ ಸಂಬಂಧಿಸಿ ಅಂತಿಮ ನಿರ್ಧಾರ ಇನ್ನೂ ಕೈಗೊಂಡಿಲ್ಲ.

ಪಶ್ಚಿಮ ಏಷ್ಯಾದ ಸಂಘರ್ಷದ ಪರಿಣಾಮ ಸೈಪಸ್ನಲ್ಲಿ ಸುರಕ್ಷತಾ ಸ್ಥಿತಿಯ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಕ್ಯಾಂಡಿಡೇಟ್ಸ್ ಟೂರ್ನಿಯ ಓಪನ್ ವಿಭಾಗದಲ್ಲಿ ವಿಜೇತನಾಗುವ ಆಟಗಾರ, ವಿಶ್ವ ಚಾಂಪಿಯನ್ ಡಿ.ಗುಕೇಶ್ ಅವರಿಗೆ ಸವಾಲು ಹಾಕುವ ಅರ್ಹತೆ ಪಡೆಯುತ್ತಾರೆ. ಮಹಿಳಾ ವಿಭಾಗದಲ್ಲಿ ಕಿರೀಟ ಧರಿಸುವ ಆಟಗಾರ್ತಿ, ಹಾಲಿ ವಿಶ್ವ ಚಾಂಪಿಯನ್ ಜು ವೆಂಜುನ್ ಅವರಿಗೆ ಚಾಲೆಂಜರ್ ಆಗಲಿದ್ದಾರೆ.

‘ನನ್ನೊಬ್ಬಳಿಂದ ಯಾವ ಬದಲಾವಣೆಯೂ ಸಾಧ್ಯವಾಗಲಿಕ್ಕಿಲ್ಲ ಎಂಬ ಅರಿವು ಇದೆ. ನಾನು ಆಡುತ್ತೇನೆಯೇ ಇಲ್ಲವೇ ಎಂಬುದಕ್ಕಿಂತ ಮುಖ್ಯವಾಗಿ, ಮನಸ್ಸಿನಲ್ಲಿರುವ ಅಭಿಪ್ರಾಯವನ್ನು ಪ್ರಾಮಾಣಿಕವಾಗಿ ವ್ಯಕ್ತಪಡಿಸುವುದು ಮುಖ್ಯ’ ಎಂದು ಅವರು ಬುಧವಾರ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ನನಗೆ ಬೆಂಬಲ ಸೂಚಿಸಿದವರಿಗೆ ನಾನು ಕೃತಜ್ಞ. ಪರಿಸ್ಥಿತಿಯ ಸೂಕ್ಷ್ಮತೆ ಅರ್ಥ ಮಾಡಿಕೊಳ್ಳದಿರುವವರಿಗೆ ಹೇಳಲು ಏನೂ ಇಲ್ಲ’ ಎಂದಿದ್ದಾರೆ

ಸೈಪ್ರಸ್ಗೆ ಹೋಗಲು ಹಿಂಜರಿಕೆಯಿದ್ದು, ಟೂರ್ನಿಯಿಂದ ಹಿಂದೆಸರಿಯುವ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ಈ ಮೊದಲು ಹಂಪಿ ಹೇಳಿದ್ದರು. ಹಂಪಿ ಅವರು ಎರಡು ಬಾರಿಯ ವಿಶ್ವ ರ್ಯಾಪಿಡ್ ಚಾಂಪಿಯನ್ ಆಗಿದ್ದಾರೆ.

ಆದರೆ ತಾಣ ಬದಲಾವಣೆ ಸಾಧ್ಯತೆ ತಿರಸ್ಕರಿಸಿರುವ ಫಿಡೆ ಸಿಇಒ ಎಮಿಲ್ ಸುತೊವ್ಸ್ಕಿ ಅವರು ‘ಅಲ್ಲಿ (ಸೈಪ್ರಸ್ನಲ್ಲಿ) ಅಪಾಯದ ಸಾಧ್ಯತೆ ತೀರಾ ಕಡಿಮೆ. ನಾವು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇವೆ’ ಎಂದು ಹೇಳಿದ್ದರು.

ಕೊಲ್ಲಿ ರಾಷ್ಟ್ರಗಳಲ್ಲಿ ಅಮೆರಿಕ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿಗಳನ್ನು ನಡೆಸುತ್ತಿರುವ ಕಾರಣ ಆ ದೇಶಗಳಲ್ಲಿ ವಾಯಪ್ರದೇಶದಲ್ಲಿ ವಿಮಾನಸಂಚಾರ ನಿರ್ಬಂಧ ಇದೆ.

ಮೆಡಿಟರೇನಿಯನ್ ದ್ವೀಪದ ಮೂರನೇ ಅತಿ ದೊಡ್ಡ ದ್ವೀಪವಾದ ಸೈಪ್ರಸ್, ಟರ್ಕಿಯ ದಕ್ಷಿಣದಲ್ಲಿದೆ. ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ.

ಮಹಿಳಾ ವಿಭಾಗದಲ್ಲಿ ಹಂಪಿ ಜೊತೆ ದಿವ್ಯಾ ದೇಶಮುಖ್, ಆರ್.ವೈಶಾಲಿ ಮತ್ತು ಓಪನ್ ವಿಭಾಗದಲ್ಲಿ ಆರ್.ಪ್ರಜ್ಞಾನಂದ ಅವರು ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ಆಡುವ ಅರ್ಹತೆ ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.