ನವದೆಹಲಿ: ಭಾರತದ ಅನುಭವಿ ಚೆಸ್ ಆಟಗಾರ್ತಿ ಕೋನೇರು ಹಂಪಿ ಅವರು ಪ್ರತಿಷ್ಠಿತ ಕ್ಯಾಂಡಿಡೇಟ್ಸ್ ಟೂರ್ನಿಯಿಂದ ಹಿಂದೆಸರಿದ ತಮ್ಮ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ‘ಯುದ್ಧ ನೌಕೆಗಳಿಂದ ಸುತ್ತುವರಿದ ದೇಶದಲ್ಲಿ ನೆಮ್ಮದಿಯಿಂದ ಆಡಲು ಆಗುವುದಿಲ್ಲ’ ಎಂದು ಹೇಳಿದ್ದಾರೆ.

‘ಯಾವುದೇ ದಂಡಕ್ಕೆ ಹೆದರುವುದಿಲ್ಲ. ನಾನು ಹಣ ಮಾಡಿಕೊಳ್ಳುವ ಉದ್ದೇಶದಿಂದ ನಾನೇನೂ ಆಡುವುದಿಲ್ಲ’ ಎಂದೂ ಕಟುವಾಗಿ ಹೇಳಿದ್ದಾರೆ.

‘ಯುದ್ಧನೌಕೆಗಳಿಂದ ಸುತ್ತುವರಿದಿರುವ ದ್ವೀಪದಲ್ಲಿ (ಸೈಪ್ರಸ್ನಲ್ಲಿ) ನಡೆಯುವ ಈ ಮಹತ್ವದ ಟೂರ್ನಿಗೆ, ಅದೂ ಮಹಿಳೆಯಾಗಿ ನಾನು ನಿರಾತಂಕವಾಗಿ ಆಡುವುದಾದರೂ ಹೇಗೆ’ ಎಂದು ಅವರು ಸುದ್ದಿಸಂಸ್ಥೆಯೆದುರು ಕಳವಳ ವ್ಯಕ್ತಪಡಿಸಿದ್ದಾರೆ. ಮೆಡಿಟರೇನಿಯನ್ ಸಾಗರದ ಪೂರ್ವದಲ್ಲಿರುವ ಈ ದೇಶ ಲೆಬನಾನ್ ಮತ್ತು ಇಸ್ರೇಲ್ಗೆ ಸನಿಹದಲ್ಲಿದೆ.

ಈ ಟೂರ್ನಿಯನ್ನು ಒಂದು ತಿಂಗಳು ಮುಂದೂಡಿದ್ದರೆ ಅಥವಾ ಬೇರೊಂದು ತಾಣಕ್ಕೆ ಸ್ಥಳಾಂತರಿಸಿದ್ದರೆ ಅಂಥ ವ್ಯತ್ಯಾಸವೇನೂ ಆಗುತ್ತಿರಲಿಲ್ಲ ಎಂದಿದ್ದಾರೆ. 2025ರಲ್ಲಿ ನಡೆದ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ರನ್ನರ್ ಅಪ್ ಆಗಿದ್ದರಿಂದ ಹಂಪಿ ಕ್ಯಾಂಡಿಡೇಟ್ಸ್ಗೆ ಅರ್ಹತೆ ಗಳಿಸಿದ್ದರು.

ಈ ಬಗ್ಗೆ ಫಿಡೆ ಉಪಾಧ್ಯಕ್ಷರೂ ಆಗಿರುವ ವಿಶ್ವನಾಥನ್ ಆನಂದ್ ಜೊತೆ ಮಾತುಕತೆ ನಡೆಸಿದ್ದೀರಾ ಎಂಬ ಪ್ರಶ್ನೆಗೆ, ಚರ್ಚೆ ನಡೆದಿತ್ತು ಎಂದ ಅವರು ವಿವರ ಬಹಿರಂಗಪಡಿಸಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.