ಬೆಂಗಳೂರು: ಸಂಘಟಿತ ಪ್ರದರ್ಶನ ತೋರಿದ ಬೆಂಗಳೂರಿನ ಧ್ಯಾನ್ಚಂದ್ ಹಾಕಿ ಕ್ಲಬ್ ತಂಡವು ಕೆಎಸ್ಎಚ್ಎ ‘ಬಿ’ ಡಿವಿಷನ್ ಲೀಗ್ ಹಾಕಿ ಚಾಂಪಿಯನ್ಷಿಪ್ ಪಂದ್ಯದಲ್ಲಿ ಮಂಗಳವಾರ 8–1ರಿಂದ ಧಾರವಾಡದ ಧ್ಯಾನ್ಚಂದ್ ಕ್ಲಬ್ ತಂಡದ ವಿರುದ್ಧ ಸುಲಭ ಗೆಲುವು ಸಾಧಿಸಿತು.

ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ (ಕೆಎಸ್ಎಚ್ಎ) ಆಶ್ರಯದಲ್ಲಿ ನಡೆಯುತ್ತಿರುವ ಟೂರ್ನಿಯ ಪಂದ್ಯದಲ್ಲಿ ಬೆಂಗಳೂರಿನ ಧ್ಯಾನ್ಚಂದ್ ಹಾಕಿ ಕ್ಲಬ್ ತಂಡದ ಶ್ರೇಯಸ್ (2ನೇ ಹಾಗೂ 3ನೇ ನಿ.), ಜೇಸನ್ (14ನೇ ಹಾಗೂ 24ನೇ ನಿ.) ಮತ್ತು ವಿವೇಕ್ (11ನೇ ಹಾಗೂ 25ನೇ ನಿ.) ತಲಾ ಎರಡು ಗೋಲು ಹೊಡೆದರು. ರಾಮ (28ನೇ ನಿ.) ಮತ್ತು ಮೈಕ್ (43ನೇ ನಿ.) ತಲಾ ಒಂದು ಗೋಲು ಗಳಿಸಿದರು. ಧಾರವಾಡ ತಂಡದ ಸುನಿಲ್ (48ನೇ ನಿ.) ಏಕೈಕ ಗೋಲು ಹೊಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.