ನವದೆಹಲಿ: ಭಾರತದ ಯುವ ಅಥ್ಲೀಟ್ ಲೋಕೇಶ್ ಸತ್ಯನಾಥನ್ ಅವರು ಅಮೆರಿಕದ ಅರ್ಕಾನ್ಸಸ್ನ ಫಯೆಟ್ವಿಲೆಯಲ್ಲಿ ನಡೆದ ಎನ್ಸಿಎಎ ಒಳಾಂಗಣ ಚಾಂಪಿಯನ್ಷಿಪ್ನಲ್ಲಿ ಲಾಂಗ್ಜಂಪ್ ಚಿನ್ನ ಗೆಲ್ಲುವ ಮೂಲಕ ತಮ್ಮ ಕ್ರೀಡಾಜೀವನದ ಪ್ರಮುಖ ಮೈಲಿಗಲ್ಲು ಸಾಧಿಸಿದರು.

ಅವರು ಶುಕ್ರವಾರ ನಡೆದ ಕೂಟದಲ್ಲಿ 8.21 ಮೀ. ಜಿಗಿಯುವ ಮೂಲಕ ಹೊಸ ದಾಖಲೆ ಸ್ಥಾಪಿಸಿದರು. ದೇಶದ ಸಾರ್ವಕಾಲಿಕ ಲಾಂಗ್ಜಂಪ್ ಅಥ್ಲೀಟುಗಳ ಸಾಲಿನಲ್ಲಿ ಮೂರನೇ ಸ್ಥಾನಕ್ಕೇರಿದರು. ಜೆಸ್ವಿನ್ ಆಲ್ಡ್ರಿನ್ (8.42 ಮೀ) ಮತ್ತು ಮುರಳಿ ಶ್ರೀಶಂಕರ್ (8.41 ಮೀ.) ಮಾತ್ರ ಅವರಿಗಿಂತ ಹೆಚ್ಚು ದೂರ ಜಿಗಿದಿದ್ದಾರೆ.

ಟಾರ್ಲಟನ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಲೋಕೇಶ್ ಫೈನಲ್ನ ನಾಲ್ಕನೆ ಯತ್ನದಲ್ಲಿ 8.21 ಮೀ. ಜಿಗಿದು ನೂತನ ದಾಖಲೆ (ಒಳಾಂಗಣ) ಸ್ಥಾಪಿಸಿದರು. ದಕ್ಷಿಣ ಮಿಸಿಸಿಪಿಯ ವಾರ್ಡ್ ವಿಶ್ವವಿದ್ಯಾಲಯದ ಡಿ‘ ಆಂಡ್ರೆ (8.20 ಮೀ.) ಎರಡನೇ ಸ್ಥಾನಕ್ಕೆ ಸರಿದರೆ, ಕನ್ಸಾಸ್ ಸ್ಟೇಟ್ ವಿಶ್ವವಿದ್ಯಾಲಯದ ತಫದ್ಝ್ವಾ ಚಿಕೊಂಬ (8.15 ಮೀ.) ಮೂರನೇ ಸ್ಥಾನ ಗಳಿಸಿದರು.

ಈ ಕೂಟವನ್ನು ನ್ಯಾಷನಲ್ ಕಾಲೇಜಿಯೇಟ್ ಅಥ್ಲೆಟಿಕ್ ಅಸೋಸಿಯೇಷನ್ (ಎನ್ಸಿಎಎ) ಆಯೋಜಿಸುತ್ತದೆ.

‘ನಾನು ದೇವರಿಗೆ ಕೃತಜ್ಞ. ನನಗೆ ಬೆಂಬಲವಾಗಿರುವ ಬೆಂಗಳೂರಿನಲ್ಲಿರುವ ನನ್ನ ಕುಟುಂಬಕ್ಕೆ, ಇಲ್ಲಿ ನನ್ನ ಕುಟುಂಬವೇ ಆಗಿರುವ ಕೋಚ್ಗೂ ಧನ್ಯವಾದ ಸಲ್ಲಿಸುತ್ತೇನೆ’ ಎಂದು ಅವರು ಹೆಳಿದರು.

ಎನ್ಸಿಎಎ ಡಿವಿಷನ್ 1 ಒಳಾಂಗಣ ಟ್ರ್ಯಾಕ್ ಮತ್ತು ಫೀಲ್ಡ್ ಕೂಟದಲ್ಲಿ ಚಿನ್ನ ಗೆದ್ದಿರುವ ನಾಲ್ಕನೇ ಭಾರತೀಯ ಅವರು. ಇದಕ್ಕೆ ಮೊದಲು ಮೊಹಿಂದರ್ ಸಿಂಗ್ ಗಿಲ್, ವಿಕಾಸ ಗೌಡ ಮತ್ತು ತೇಜಸ್ವಿನ್ ಶಂಕರ್ ಈ ಚಾಂಪಿಯನ್ಷಿಪ್ನಲ್ಲಿ ಚಿನ್ನ ಗೆದ್ದಿದ್ದರು.

ಅವರು ವರ್ಷದ ಹಿಂದೆ ನಡೆದ ಹೊರಾಂಗಣ ಕೂಟದಲ್ಲಿ ಐದನೇ ಸ್ಥಾನ ಗಳಿಸಿದ್ದರು. 2018ರಲ್ಲಿ 20 ವರ್ಷದೊಳಗಿನವರ ವಿಶ್ವ ಅಥ್ಲೆಟಿಕ್ ಕೂಟದಲ್ಲಿ ಭಾಗವಹಿಸಿದ್ದರು.

ಲೋಕೇಶ್ ಅವರ ತಾಯಿ 2021ರಲ್ಲಿ ಕೋವಿಡ್ನಿಂದ ಮೃತಪಟ್ಟಿದ್ದರು. ಅವರ ತಂದೆ ಫುಟ್ಬಾಲ್ ಆಟಗಾರ. ಸೋದರಿ, ರಾಷ್ಟ್ರೀಯ ಮಟ್ಟದ 400 ಮೀ. ಓಟಗಾರ್ತಿ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.