ಬೆಂಗಳೂರು: ಕರ್ನಾಟಕದ ಪುರುಷೋತ್ತಮ್ ಅವರು ರಾಷ್ಟ್ರೀಯ ಓಪನ್ ಜಂಪ್ ಸ್ಪರ್ಧೆಯ ಪುರುಷರ ಲಾಂಗ್ಜಂಪ್ನಲ್ಲಿ ಭಾನುವಾರ ಸ್ವರ್ಣ ಜಯಿಸಿದರು. ಮಹಿಳೆಯರ ವಿಭಾಗದಲ್ಲಿ ಲಕ್ಷದ್ವೀಪದ ಉದಯೋನ್ಮುಖ ಅಥ್ಲೀಟ್ ಮುಬಾಸಿನಾ ಮೊಹಮ್ಮದ್ ಚಿನ್ನದ ಪದಕ ತಮ್ಮದಾಗಿಸಿಕೊಂಡರು.

24 ವರ್ಷ ವಯಸ್ಸಿನ, ಹಾಸನದ ಅಥ್ಲೀಟ್ ಪುರುಷೋತ್ತಮ ಅವರು ತಮ್ಮ ಐದನೇ ಯತ್ನದಲ್ಲಿ 7.87 ಮೀ. ಜಿಗಿದರು. ಅದರೊಂದಿಗೆ ವೈಯಕ್ತಿಯ ದಾಖಲೆಯನ್ನು (7.59 ಮೀ.) ಸುಧಾರಿಸಿಕೊಂಡರು. ತಮಿಳುನಾಡಿನ ಎಸ್.ಶರಣ್ (7.78 ಮೀ.) ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.

ರಾಷ್ಟ್ರೀಯ ದಾಖಲೆ ಹೊಂದಿರುವ ಜಸ್ವಿನ್ ಅಲ್ಡ್ರಿನ್ ಹಾಗೂ ಅನುಭವಿ ಅಥ್ಲೀಟ್ ಎಂ.ಶ್ರೀಶಂಕರ್ ಅವರು ಕೂಟದಲ್ಲಿ ಭಾಗವಹಿಸಿಲ್ಲ.

ಸ್ವರ್ಣ ಗೆದ್ದಿರುವುದಕ್ಕೆ ಖುಷಿ ಇದೆ. ಏಷ್ಯನ್ ಗೇಮ್ಸ್ಗೆ ಅರ್ಹತೆ (6.48 ಮೀ.) ಪಡೆಯುವುದು ನನ್ನ ಮುಂದಿನ ಗುರಿ ಎಂದು ಮುಬಾಸಿನಾ ಪ್ರತಿಕ್ರಿಯಿಸಿದರು.

28 ವರ್ಷದೊಳಗಿನ ಮಹಿಳೆಯರ ಲಾಂಗ್ಜಂಪ್ ಸ್ಪರ್ಧೆಯಲ್ಲಿ ರಾಜ್ಯದ ಸಾಕ್ಷಿ ಕ್ರಿಸ್ಟಿನಾ (5.26 ಮೀ.) ರತಜ ಪದಕ ಜಯಿಸಿದರು. 18 ವರ್ಷದೊಳಗಿನ ಪುರುಷರ ಲಾಂಗ್ಜಂಪ್ನಲ್ಲಿ ಆ್ಯರನ್ ಎಸ್. (6.89 ಮೀ.) ಕಂಚಿನ ಪದಕ ಜಯಿಸಿದರು.

ಫಲಿತಾಂಶಗಳು

ಪುರುಷರು

ಲಾಂಗ್ಜಂಪ್: ಪುರುಷೋತ್ತಮ್ (ಕರ್ನಾಟಕ; 7.87 ಮೀ.)–1, ಎಸ್.ಶರಣ್ (ತಮಿಳುನಾಡು; 7.78 ಮೀ.)–2.

20 ವರ್ಷದೊಳಗಿನ ಪುರುಷರು

ಲಾಂಗ್ಜಂಪ್: ಯುವರಾಜ್ ಕೆ. (ಎನ್ಸಿಒಟಿ; 7.63 ಮೀ.)–1, ಆಯುಷ್ ಯಾದವ್ (ದೆಹಲಿ; 7.26 ಮೀ.)–2, ಧನುಷ್ ರಾಜ್ (ಕೇರಳ; 7.06 ಮೀ.) –3

ಪೋಲ್ವಾಲ್ಟ್: ಆರ್.ಹರಿಹರನ್ ರಮೇಶ್ (ತಮಿಳುನಾಡು; 4.55 ಮೀ.)–1, ಅಜೀತ್ ಕುಮಾರ್ (ರಾಜಸ್ಥಾನ; 4.5 ಮೀ.)–2, ಆಶಿಷ್ ಯಾದವ್ (ಮಧ್ಯಪ್ರದೇಶ; 4.40 ಮೀ.)–3.

18 ವರ್ಷದೊಳಗಿನ ಪುರುಷರು

ಹೈಜಂಪ್: ದೇವಕ್ ಭೂಷಣ್ (ಕೇರಳ; 2.03 ಮೀ.), ಜುಬಿನ್ ಗೊಹೈನ್ (ಜೆಎಸ್ಡಬ್ಲ್ಯು; 1.95 ಮೀ.)–2, ವೀರೇಂದ್ರ ಆರ್. (ಮಹಾರಾಷ್ಟ್ರ; 1.85 ಮೀ.)–3.

ಲಾಂಗ್ಜಂಪ್: ರಾಜೀವ್ ರಾಯ್ (ಎನ್ಸಿಒಟಿ; 7.45 ಮೀ.)–1, ಸಾಗರ್ ಪ್ರಜಾಪತಿ (ಉತ್ತರಪ್ರದೇಶ; 7.07 ಮೀ.)–2, ಆ್ಯರನ್ (ಕರ್ನಾಟಕ; 6.89 ಮೀ.)–3.

ಮಹಿಳೆಯರು

ಲಾಂಗ್ಜಂಪ್: ಮುಬಾಸಿನಾ ಮೊಹಮ್ಮದ್ (ಲಕ್ಷದ್ವೀಪ; 6.38 ಮೀ.)–1, ಭಾವನಿ ಯಾದವ್ –2, ಕುಸುಮಾ ಆರ್. (ಎಬಿಎಸ್ಎಫ್)– 3.

ಪೋಲ್ವಾಲ್ಟ್: ಬರಾನಿಕಾ ಇಳಂಗೊವನ್ (ತಮಿಳುನಾಡು; 4.10ಮೀ.)–1, ಸಿಂಧು ಶ್ರೀ (ಎನ್ಸಿಒಬಿ; 3.95 ಮೀ.)–2, ಬಬಿತಾ ಪಟೇಲ್ (ಸಿಐಎಸ್ಎಫ್; 3.90 ಮೀ.)–3.

ಹೈಜಂಪ್: ಪೂಜಾ (ಜೆಎಸ್ಡಬ್ಲ್ಯು, 1.76 ಮೀ.)–1; ಕೆವಿನಾ ಎ.ಎ. (ರಾಜಸ್ಥಾನ; 1.74 ಮೀ.)–2, ಪಲ್ಲವಿ ಪಾಟೀಲ್ (ರಾಜಸ್ಥಾನ; 1.71 ಮೀ.)–3.

20 ವರ್ಷದೊಳಗಿನ ಮಹಿಳೆಯರು

ಹೈಜಂಪ್: ಪೂಜಾ (ಎಬಿಎಸ್ಎಫ್; 1.74 ಮೀ.)–1.

18 ವರ್ಷದೊಳಗಿನ ಮಹಿಳೆಯರು

ಲಾಂಗ್ಜಂಪ್: ಕಶೀಶ್ (ಹರಿಯಾಣ; 5.58 ಮೀ.)–1, ಎಂ.ಜೆನಿಸ್ಟಾ ಶಾನು (ತಮಿಳುನಾಡು; 5.47 ಮೀ.)–2, ಸಾಕ್ಷಿ ಕ್ರಿಸ್ಟಿನಾ ಕರ್ಕ್ (ಕರ್ನಾಟಕ; 5.26 ಮೀ.)–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.