ಬೆಂಗಳೂರು: ಭಾರತದ ನತಾಶಾ ಚೇತನ್ ಅವರು ವಿಶ್ವ 21 ವರ್ಷದೊಳಗಿನವರ ಸ್ನೂಕರ್ ಚಾಂಪಿಯನ್‌ಷಿಪ್ ಮಹಿಳೆಯರ ವಿಭಾಗದ ಪ್ರಶಸ್ತಿ ಗೆದ್ದರು. ಇದು ಅವರ ವೃತ್ತಿಜೀವನದ ಮೊದಲ ಕಿರೀಟವಾಗಿದೆ.
ಕರ್ನಾಟಕ ರಾಜ್ಯ ಬಿಲಿಯರ್ಡ್ಸ್ ಸಂಸ್ಥೆಯಲ್ಲಿ ನಡೆಯುತ್ತಿರುವ ಟೂರ್ನಿಯ ಫೈನಲ್‌ನಲ್ಲಿ ನತಾಶಾ 3–2 (21-67 (31), 60-41, 67-45, 10-81, 45-34) ರಿಂದ ಥಾಯ್ಲೆಂಡ್‌ನ ನರುಚಾ ಫೋಮ್‌ಫುಲ್ ವಿರುದ್ಧ ಜಯಿಸಿದರು.