ಕ್ವಾಲಾಲಂಪುರ: ಭಾರತದ ಅಶ್ಮಿತಾ ಚಾಲಿಹಾ ಅವರು ಅರ್ಹತಾ ಸುತ್ತಿನಲ್ಲಿ ಚೀನಾ ತೈಪೆಯ ಪಾಯ್ ಯು–ಪೊ ಅವರನ್ನು ಸೋಲಿಸಿ ಮಲೇಷ್ಯಾ ಮಾಸ್ಟರ್ಸ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯ ಪ್ರಧಾನ ಸುತ್ತಿನಲ್ಲಿ ಆಡುವ ಅವಕಾಶ ಪಡೆದರು.

ಮಂಗಳವಾರ ನಡೆದ ಪಂದ್ಯದಲ್ಲಿ, 26 ವರ್ಷ ವಯಸ್ಸಿನ ಅಶ್ಮಿತಾ 21–23, 21–26, 21–16 ರಿಂದ ಯು–ಪೊ ಅವರನ್ನು ಪರಾಭವಗೊಳಿಸಿದರು.ಅವರು ಟೂರ್ನಿಯ ಮೊದಲ ಸುತ್ತಿನಲ್ಲಿ, ವಿಶ್ವ ಕ್ರಮಾಂಕದಲ್ಲಿ 56ನೇ ಸ್ಥಾನದಲ್ಲಿರುವ ಇಂಡೊನೇಷ್ಯಾದ ತಲಿಟಾ ರಾಮಧಾನಿ ವಿರ್ಯವಾನ್ ಅವರನ್ನು ಎದುರಿಸಲಿದ್ದಾರೆ.

ಆದರೆ ಆಕರ್ಷಿ ಕಶ್ಯಪ್ ಅವರ ಸವಾಲು ಅರ್ಹತಾ ಸುತ್ತಿನಲ್ಲೇ ಕೊನೆಗೊಂಡಿತು. ಅವರು ಅವರು ದಕ್ಷಿಣ ಕೊರಿಯಾದ ಪಾರ್ಕ್ ಗಾ ಯುನ್ ಎದುರು 21–15, 20–22, 7–21ರಲ್ಲಿ ಮಣಿದರು.

ಹರಿಹರನ್–ಅರ್ಜುನ್ಗೆ ಅಚ್ಚರಿಯ ಜಯ: ಭಾರತದ ಡಬಲ್ಸ್ ಜೋಡಿಯಾದ ಹರಿಹರನ್ ಅಮ್ಸಕರುಣನ್ –ಎಂ.ಆರ್.ಅರ್ಜುನ್ ಜೋಡಿ 21–19, 21–15 ರಿಂದ ಏಳನೇ ಶ್ರೇಯಾಂಕದ ಸೋದರ ಜೋಡಿಯಾದ ಕ್ರಿಸ್ಟೊ ಪೊಪೊವ್– ಟೋಮಾ ಜೂನಿಯರ್ ಪೊಪೊವ್ (ಫ್ರಾನ್ಸ್) ಅವರನ್ನು ಹಿಮ್ಮೆಟ್ಟಿಸಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-51-1812686527

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.