ಕ್ವಾಲಾಲಂಪುರ: ಅಶ್ಮಿತಾ ಚಾಲಿಹಾ ಅವರು ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಸೂಪರ್ 500 ಟೂರ್ನಿಯ ಮಹಿಳಾ ಸಿಂಗಲ್ಸ್ ಎಂಟರ ಘಟ್ಟ ಪ್ರವೇಶಿಸಿದರು. ಆದರೆ ಭಾರತದ ಉಳಿದ ಸ್ಪರ್ಧಿಗಳು ಪ್ರಿಕ್ವಾರ್ಟರ್ಫೈನಲ್ನಲ್ಲಿ ಹೊರಬಿದ್ದರು.

ಗುರುವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಅಶ್ಮಿತಾ ಸರ್ವಾಂಗೀಣ ಆಟವಾಡಿ 21–13, 21–16 ರಿಂದ ಮಲೇಷ್ಯಾದ ಗೋಹ್ ಜಿನ್ ವೀ ಅವರನ್ನು ಸೋಲಿಸಿದರು. ಅಶ್ಮಿತಾ ಕ್ವಾರ್ಟರ್ಫೈನಲ್ನಲ್ಲಿ ಎಂಟನೆ ಶ್ರೇಯಾಂಕದ ಲಿನೆ ಹೊಜ್ಮಾರ್ಕ್ ಜೇರ್ಸ್ಫೆಲ್ಟ್ (ಡೆನ್ಮಾರ್ಕ್) ಅವರನ್ನು ಎದುರಿಸಲಿದ್ದಾರೆ. ಡೆನ್ಮಾರ್ಕ್ನ ಆಟಗಾರ್ತಿ ಸುಮಾರು ಒಂದು ಗಂಟೆ ನಡೆದ ಇನ್ನೊಂದು ಪಂದ್ಯದಲ್ಲಿ ಭಾರತದ ಮಾಳವಿಕಾ ಬನ್ಸೋಡ್ ಅವರನ್ನು 16–21, 21–8, 21–15 ರಿಂದ ಸೋಲಿಸಿದರು.

ಅಗ್ರ ಶ್ರೇಯಾಂಕ ಪಡೆದಿರುವ ಚೀನಾದ ಆಟಗಾರ್ತಿ ಚೆನ್ ಯೂಫಿ 22–16, 21–13 ರಿಂದ ದೇವಿಕಾ ಸಿಹಾಗ್ ಅವರನ್ನು ಹಿಮ್ಮೆಟ್ಟಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-51-739991835

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.