ಮಂಗಳೂರು: ಬೆಂಗಳೂರಿನ ಬೆಸ್ಟ್ ಶಾಟ್ ಶೂಟಿಂಗ್ ಅಕಾಡೆಮಿಯ ಡಿ.ಆಕಾಶ್ ಮತ್ತು ಹಾಕ್ ಐ ಸಂಸ್ಥೆಯ ಅವಂತಿಕಾ ಮಧು ಇಲ್ಲಿ ನಡೆಯುತ್ತಿರುವ ಮಂಗಳೂರು ಓಪನ್ ಶೂಟಿಂಗ್ ಚಾಂಪಿಯನ್ಷಿಪ್ನ ಎರಡನೇ ಆವೃತ್ತಿಯಲ್ಲಿ ಕ್ರಮವಾಗಿ ಪುರುಷರ ಏರ್ ರೈಫಲ್ ಮತ್ತು ಮಹಿಳೆಯರ ಏರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನ ಗೆದ್ದುಕೊಂಡರು.

ಕದ್ರಿಯ ಮಂಗಳೂರು ರೈಫಲ್ಸ್ ಕ್ಲಬ್ ಆವರಣದಲ್ಲಿ ನಡೆಯುತ್ತಿರುವ ಚಾಂಪಿಯನ್ಷಿಪ್ನ 4ನೇ ದಿನವಾದ ಶುಕ್ರವಾರ ಆಕಾಶ್ 619.6 ಸ್ಕೋರು ಕಲೆ ಹಾಕಿದರು. ಅಂವತಿಕಾ 574 ಸ್ಕೋರುಗಳೊಂದಿಗೆ ಮೊದಲಿಗರಾದರು. ಪುರುಷರ ಏರ್ ಪಿಸ್ಕೂಲ್ನಲ್ಲಿ ಕರ್ನಾಟಕ ರಾಜ್ಯ ರೈಫಲ್ ಸಂಸ್ಥೆಯ ಮಮಿತ್ ಗೌಡ 573 ಸ್ಕೋರುಗಳೊಂದಿಗೆ ಚಿನ್ನಕ್ಕೆ ಮುತ್ತಿಕ್ಕಿದರು. ಮಹಿಳೆಯರ ಏರ್ ರೈಫಲ್ನಲ್ಲಿ ಝೀಲ್ ಶೂಟಿಂಗ್ ಅಕಾಡೆಮಿಯ ಶ್ರಾವ್ಯಾ ಎಂ (623.9) ಚಿನ್ನ ಗೆದ್ದುಕೊಂಡರು.

ಪುರುಷರ ಏರ್ ರೈಫಲ್ನ ಬೆಳ್ಳಿ ಪದಕವೂ ‘ಬೆಸ್ಟ್’ ಪಾಲಾಯಿತು. ಆಯುಷ್ ರವಿಕುಮಾರ್ (614.9) ಪದಕ ಗಳಿಸಿಕೊಟ್ಟರು. ಹುಬ್ಬಳ್ಳಿ ಶೂಟಿಂಗ್ ಅಕಾಡೆಮಿಯ ಹರ್ಷ ಭದ್ರಾಪುರ ಕಂಚಿನ ಪದಕ ಗಳಿಸಿದರು. ಮಹಿಳಾ ವಿಭಾಗದ ಚಿನ್ನ ‘ಬೆಸ್ಟ್’ನ ಸಾನ್ವಿ (625.9) ಗಳಿಸಿದರೆ ಶ್ರಾವ್ಯಾ ಮತ್ತು ಅದಿತಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರು.

ಪುರುಷರ ಏರ್ ಪಿಸ್ತೂಲ್ ವಿಭಾಗದ ಬೆಳ್ಳಿ ಮತ್ತು ಕಂಚು ಕ್ರಮವಾಗಿ ಗದಗ ಸ್ಪೋರ್ಟ್ಸ್ ಶೂಟಿಂಗ್ ಅಕಾಡೆಮಿಯ ಸಿದ್ಧಾರ್ಥ್ ಬದ್ನಿ ಮತ್ತು ಅಗಸ್ತ್ಯ ಸ್ಪೋರ್ಟ್ಸ್ ಅಕಾಡೆಮಿಯ ಸುಬ್ರಮಣಿ ಗಳಿಸಿದರು. ಮಹಿಳಾ ವಿಭಾಗದಲ್ಲಿ ಹಾಕ್ ಐನ ಧನ್ವಿತಾ ಮತ್ತು ಗಾಂಭೀರ್ಯ ಗೌಡ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗಳಿಸಿದರು.

ನ್ಯಾಷನಲ್ ರೆಕಾರ್ಡ್ ವಿಭಾಗದ ಫಲಿತಾಂಶ: ಏರ್ ರೈಫಲ್: ಪುರುಷರು: ಕಿಯಾನ್ ದಾಸ್ (ಏಕಲವ್ಯ)–1. ಸ್ಕೋರು: 391, ಸ್ಮಯನ್ ಕೆ.ಎಸ್ (ಇಎಸ್ಎಚ್)–2, ಬೆವನ್ ಆ್ಯಂಟನಿ ರೊಸಾರಿಯೊ (ಇಎಸ್ಎಚ್)–3; ಮಹಿಳೆಯರು: ಮುಕ್ತಾ ವರ್ಮಾ (ಹಾಕ್ ಐ)–1. ಸ್ಕೋರು: 394, ಐಶಾಣಿ (ಇಎಸ್ಎಚ್)–2, ಅಮೋಘ (ಹಾಕ್ ಐ)–3; ಏರ್ ಪಿಸ್ತೂಲ್: ಪುರುಷರು: ರಿಯಾನ್ ಮುನಿರುದ್ದೀನ್ ಅಹಮ್ಮದ್ (ಗದಗ ಸ್ಪೋರ್ಟ್ಸ್ ಶೂಟಿಂಗ್ ಅಕಾಡೆಮಿ)–1. ಸ್ಕೋರು: 378, ಗುರುಕೀರತ್ (ಕೆಎಸ್ಆರ್ಎ)–2, ಸಮರ್ ಶಾನುಭೋಗ್ (ವಿವೇಕಾನಂದ)–3; ಮಹಿಳೆಯರು: ಪ್ರಿಯಾ ಡ್ಯಾನಿಯಲ್ (ಝೀಲ್)–1. ಸ್ಕೋರು: 364, ಇಂದು ಶೀತಲ್ (ಗೋಲ್ಡನ್ ಏಸ್)–2, ದಿಶಿ ಪೊನ್ನಪ್ಪ (ಬಿಆರ್ಎಸ್ಎ)–3.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-29-29918126

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.