ಉಜಿರೆ: ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಆಶ್ರಯದಲ್ಲಿ ಕೊಣಾಜೆ ವಿವಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ನೆಟ್ಬಾಲ್ ಟೂರ್ನಿಯಲ್ಲಿ ಉಜಿರೆಯ ಎಸ್ಡಿಎಂ ಕಾಲೇಜಿನ ಪುರುಷ ಹಾಗೂ ಮಹಿಳೆಯರ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಕಾಲೇಜಿನ ಪುರುಷರ ತಂಡ ಅಂತಿಮ ಪಂದ್ಯದಲ್ಲಿ ಮೂಡುಬಿದಿರೆಯ ಧವಳಾ ಕಾಲೇಜು ತಂಡದ ವಿರುದ್ಧ ಸೆಣಸಾಡಿ 23–17 ಪಾಯಿಂಟ್ಗಳ ಅಂತರದಿಂದ ಜಯ ಸಾಧಿಸಿತು. ತಂಡದಲ್ಲಿ ಚಿಂತನ್, ದಿನೇಶ್, ಪುನೀತ್, ಕೀರ್ತನ್, ಮಣಿಕಂಠ, ಸಾತ್ವಿಕ್, ಪ್ರವೀಣ್, ಮನೋಜ್, ಅಭಿಷೇಕ್, ಶಯಾನ್, ಶ್ರೀಕಾಂತ್ ಇದ್ದರು.

ಎಸ್.ಡಿ.ಎಂ. ಕಾಲೇಜು ಮಹಿಳಾ ತಂಡ ಅಂತಿಮ ಪಂದ್ಯದಲ್ಲಿ ಮೂಡುಬಿದಿರೆಯ ಧವಳಾ ಕಾಲೇಜು ತಂಡವನ್ನು ಎದುರಿಸಿ 20–09 ಪಾಯಿಂಟ್ಗಳ ಅಂತರದಿಂದ ಜಯ ಸಾಧಿಸಿತು. ತಂಡದಲ್ಲಿ ವರ್ಷಿತಾ, ರಶ್ಮಿ ಎಸ್, ಮನೀಷಾ, ಸುರಕ್ಷಾ ಆಚಾರ್ಯ, ಪಲ್ಲವಿ, ಧನುಶ್ರೀ, ಎಚ್.ಆರ್. ಭೂಮಿಕಾ ಶೆಟ್ಟಿ, ಸಹನಾ, ಪೂಜಾಶ್ರೀ, ಸಿಂಚನಾ ಇದ್ದರು. 16 ವರ್ಷಗಳಿಂದ ಸತತವಾಗಿ ಎಸ್.ಡಿ.ಎಂ. ಕಾಲೇಜಿನ ಪುರುಷರು, ಮಹಿಳೆಯರ ತಂಡ ನೆಟ್ಬಾಲ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮುತ್ತಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-29-1273052749

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.