ನವದೆಹಲಿ: ಭಾರತದ ಮಾನವ್ ಶಾ ಹಾಗೂ ದಿಯಾ ಚಿತಳೆ ಅವರು ಟ್ಯುನಿಸ್ನಲ್ಲಿ ನಡೆಯುತ್ತಿರುವ ಡಬ್ಲ್ಯುಟಿಟಿ ಕಂಟೆಂಡರ್ ಟೇಬಲ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್ನಲ್ಲಿ ರನ್ನರ್ಸ್ಅಪ್ ಆದರು.

ಅಗ್ರ ಶ್ರೇಯಾಂಕ ಪಡೆದಿದ್ದ ಭಾರತದ ಜೋಡಿಯು ಶನಿವಾರ ತಡರಾತ್ರಿ ನಡೆದ ಫೈನಲ್ನಲ್ಲಿ 1–3ರಿಂದ (9–11, 13–11, 10–12, 5–11) ಸ್ಪೇನ್ನ ಅಲ್ವರೊ ರಾಬೆಲ್ಸ್ ಹಾಗೂ ಮರಿಯಾ ಶಿಯಾವೊ ವಿರುದ್ಧ ಪರಾಭವಗೊಂಡಿತು.

ಮಾನುಷ್– ಹರ್ಮೀತ್ ದೇಸಾಯಿ ಅವರು ಪುರುಷರ ಡಬಲ್ಸ್ನಲ್ಲಿ ಪ್ರಶಸ್ತಿ ಸುತ್ತು ಪ್ರವೇಶಿಸಿದರು. ಈ ಜೋಡಿಯು ನಾಲ್ಕರ ಘಟ್ಟದಲ್ಲಿ 3–2ರಿಂದ (9–11, 5–11, 11–7, 11–5, 11–8) ಸ್ವದೇಶದ ಸ್ನೇಹಿತ್ ಸುರವಜ್ಜುಲ ಹಾಗೂ ಆಕಾಶ್ ಪಾಲ್ ವಿರುದ್ಧ ರೋಚಕ ಜಯ ಸಾಧಿಸಿತು.

ಮಾನುಷ್– ಹರ್ಮೀತ್ ಜೋಡಿಯು ಫೈನಲ್ನಲ್ಲಿ ಅಗ್ರ ಶ್ರೇಯಾಂಕ ಪಡೆದಿರುವ ಫ್ರಾನ್ಸ್ನ ಫ್ಲಾರಿಯನ್ ಬುರಾಸಾದ್ ಹಾಗೂ ಈಸ್ಟಬನ್ ಡಾರ್ ಅವರನ್ನು ಎದುರಿಸಲಿದ್ದಾರೆ.

ಆದರೆ, ಮಹಿಳೆಯರ ಡಬಲ್ಸ್ನಲ್ಲಿ ಕಣಕ್ಕಿಳಿದಿದ್ದ ದಿಯಾ– ಯಶಸ್ವಿನಿ ಘೋರ್ಪಡೆ ಹಾಗೂ ಸಿಂಡ್ರೆಲಾ ದಾಸ್– ಸುಕೃತಾ ಮುಖರ್ಜಿ ಜೋಡಿಯ ಹೋರಾಟ ಸೆಮಿಫೈನಲ್ನಲ್ಲಿ ಅಂತ್ಯಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.