ಬೆಂಗಳೂರು: ಸರಾಯು ಮತ್ತು ಬಿಂಧುಶ್ರೀ ಅವರ ಆಟದ ನೆರವಿನಿಂದ ಯಂಗ್ ಓರಿಯನ್ಸ್ ಎಸ್.ಸಿ ತಂಡವು ಎಸ್ಎಂಎನ್ ಸ್ಮಾರಕ ಟ್ರೋಫಿಗಾಗಿ ನಡೆಯುತ್ತಿರುವ ಮಾತೃ ಕಪ್ ರಾಜ್ಯಮಟ್ಟದ ಮಹಿಳೆಯರ ಬ್ಯಾಸ್ಕೆಟ್ಬಾಲ್ ಚಾಂಪಿಯನ್ಷಿಪ್ನ ಲೀಗ್ ಪಂದ್ಯದಲ್ಲಿ 63–54ರಿಂದ ರಾಜ್ಮಹಲ್ ತಂಡವನ್ನು ಮಣಿಸಿತು.

ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ವಿರಾಮದ ವೇಳೆ ಓರಿಯನ್ಸ್ ತಂಡವು 28–34ರಿಂದ ಹಿನ್ನೆಡೆಯಲ್ಲಿತ್ತು. ಉತ್ತರಾರ್ಧದಲ್ಲಿ ಪಾರಮ್ಯ ಮೆರೆದ ತಂಡವು 9 ಅಂಕಗಳಿಂದ ಜಯಿಸಿತು. ಸರಾಯು ಮತ್ತು ಬಿಂಧುಶ್ರೀ ತಲಾ 20 ಅಂಕ ಗಳಿಸಿದರು. ರಾಜ್ಮಹಲ್ ಪರ ನಿಕಿತಾ 19 ಪಾಯಿಂಟ್ಸ್ ಕಲೆ ಹಾಕಿದರು.

ಫಲಿತಾಂಶಗಳು: ನೈಋತ್ಯ ರೈಲ್ವೆ ಮೈಸೂರು 86–18ರಿಂದ ಭಾರತ್ ಎಸ್.ಯು ವಿರುದ್ಧ; ಡಿವೈಇಎಸ್ ಮೈಸೂರು 62–28ರಿಂದ ಆಲ್ ಸ್ಟಾರ್ ಮೈಸೂರು ಬಿ.ಸಿ ವಿರುದ್ಧ; ಮೌಂಟ್ಸ್ ಬಿ.ಸಿ. 36–14ರಿಂದ ಪಟ್ಟಾಭಿರಾಮನಗರ ಬಿ.ಸಿ ವಿರುದ್ಧ; ಬೀಗಲ್ಸ್ ಬಿ.ಸಿ 59–30ರಿಂದ ವಿವೇಕ್ಸ್ ಎಸ್.ಸಿ ವಿರುದ್ಧ; ಜೆಎಸ್ಸಿ 83–31ರಿಂದ ಡಿವೈಇಎಸ್ ವಿದ್ಯಾನಗರ ವಿರುದ್ಧ; ಯಂಗ್ ಓರಿಯನ್ಸ್ ಎಸ್ಸಿ 63–54ರಿಂದ ರಾಜ್ಮಹಲ್ ವಿರುದ್ಧ ಗೆಲುವು ಸಾಧಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.