ಬೆಂಗಳೂರು: ವಿವೇಕ್ಸ್ ಸ್ಪೋರ್ಟ್ಸ್ ಕ್ಲಬ್ ತಂಡವು ಬುಧವಾರ ಆರಂಭವಾದ ಮಾತೃ ಕಪ್ ರಾಜ್ಯ ಮಟ್ಟದ ಬ್ಯಾಸ್ಕೆಟ್ಬಾಲ್ ಚಾಂಪಿಯನ್ಷಿಪ್ ಪಂದ್ಯದಲ್ಲಿ 55–04ರಿಂದ ಕೋಲಾರ ಜಿಲ್ಲಾ ತಂಡವನ್ನು ನಿರಾಯಾಸವಾಗಿ ಮಣಿಸಿತು.

ಕಂಠೀರವ ಒಳಾಂಗಣ ಕ್ರೀಡಾಂಗಣದ ಬ್ಯಾಸ್ಕೆಟ್ಬಾಲ್ ಕೋರ್ಟ್ನಲ್ಲಿ ನಡೆದ ಪಂದ್ಯದಲ್ಲಿ ವಿವೇಕ್ಸ್ ತಂಡದ ವೇದಿಕಾ (18 ಅಂಕ) ಹಾಗೂ ಶ್ರೇಷ್ಠಾ (13 ಅಂಕ) ಮಿಂಚಿದರು. ಕೋಲಾರ ತಂಡವು ಲಯ ಕಂಡುಕೊಳ್ಳಲೇ ಇಲ್ಲ.

ದಿನದ ಇತರ ಪಂದ್ಯಗಳಲ್ಲಿ ಬೆಂಗಳೂರು ವ್ಯಾನ್ಗಾರ್ಡ್ಸ್ ತಂಡವು 38–34ರಿಂದ ಭರತ್ ಸ್ಪೋರ್ಟ್ಟ್ ಯೂನಿಯನ್ ವಿರುದ್ಧ; ಜೆಎಸ್ಸಿ ತಂಡವು 52–23ರಿಂದ ವೈಎಂಎಂಎ ಬಿ.ಸಿ. ವಿರುದ್ಧ; ಪಟ್ಟಾಭಿರಾಮನಗರ ಬಿ.ಸಿ ತಂಡವು 35–24ರಿಂದ ಕೋರಮಂಗಲ ಬಿ.ಸಿ ವಿರುದ್ಧ; ಯಂಗ್ ಓರಿಯನ್ಸ್ ಸ್ಪೋರ್ಟ್ಸ್ ಕ್ಲಬ್ ತಂಡವು 48–28ರಿಂದ ಬೆಂಗಳೂರು ಸ್ಪೋರ್ಟಿಂಗ್ ಕ್ಲಬ್ ವಿರುದ್ಧ ಹಾಗೂ ಆಲ್ಸ್ಟಾರ್ಸ್ ಬಿ.ಸಿ ಮೈಸೂರು ತಂಡವು 41–36ರಿಂದ ಎಂಸಿಎಚ್ಎಸ್ ಬಿ.ಸಿ ತಂಡವನ್ನು ಸೋಲಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.