ಬೆಂಗಳೂರು: ನೈರುತ್ಯ ರೈಲ್ವೇಸ್ ತಂಡವು ಎಸ್ಎಂಎನ್ ಸ್ಮಾರಕ ಟ್ರೋಫಿಗಾಗಿ ನಡೆಯುತ್ತಿರುವ ಮಾತೃ ಕಪ್ ರಾಜ್ಯ ಮಟ್ಟದ ಮಹಿಳೆಯರ ಬ್ಯಾಸ್ಕೆಟ್ಬಾಲ್ ಚಾಂಪಿಯನ್ಷಿಪ್ನ ಲೀಗ್ ಪಂದ್ಯದಲ್ಲಿ 80–37ರಿಂದ ಬೆಂಗಳೂರು ವ್ಯಾನ್ಗಾರ್ಡ್ಸ್ ತಂಡವನ್ನು ಮಣಿಸಿ ನಾಕೌಟ್ ಹಂತ ತಲುಪಿತು.

ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ರೈಲ್ವೇಸ್ ತಂಡದ ಶೃತಿ ಅರವಿಂದ್ (26 ಅಂಕ) ಮತ್ತು ಬಾಂಧವ್ಯ (25) ಗೆಲುವಿನಲ್ಲಿ ಮಿಂಚಿದರು. ಇತರ ಪಂದ್ಯಗಳಲ್ಲಿ ಡಿವೈಇಎಸ್ ಮೈಸೂರು, ಮೌಂಟ್ಸ್ ಕ್ಲಬ್ ಮತ್ತು ಬೀಗಲ್ಸ್ ಬಿ.ಸಿ ತಂಡಗಳು ಗೆಲುವಿನೊಂದಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದವು.

ಲೀಗ್ ಪಂದ್ಯಗಳ ಫಲಿತಾಂಶ: ನೈರುತ್ಯ ರೈಲ್ವೇಸ್ 80–37ರಿಂದ ಬೆಂಗಳೂರು ವ್ಯಾನ್ಗಾರ್ಡ್ಸ್ ವಿರುದ್ಧ; ಡಿವೈಇಎಸ್ ಮೈಸೂರು 53–22ರಿಂದ ಎಂಸಿಎಚ್ಎಸ್ ಬಿ.ಸಿ ವಿರುದ್ಧ; ಮೌಂಟ್ಸ್ ಬಿ.ಸಿ 59–20ರಿಂದ ಕೋರಮಂಗಲ ಬಿ.ಸಿ ವಿರುದ್ಧ; ಡಿವೈಇಎಸ್ ವಿದ್ಯಾನಗರ 43–23ರಿಂದ ವೈಎಂಎಂಎ ಬಿ.ಸಿ ವಿರುದ್ಧ ಗೆಲುವು ಸಾಧಿಸಿದವು.

ಬೀಗಲ್ಸ್ ಬಿ.ಸಿ 51–35ರಿಂದ ಕೋಲಾರ ಜಿಲ್ಲಾ ತಂಡದ ಎದುರು; ಎಚ್ಬಿಆರ್ ಬಿ.ಸಿ 52–43ರಿಂದ ರೋವರ್ಸ್ ಬಿ.ಸಿ ಧಾರವಾಡ ಎದುರು; ರಾಜ್ಮಹಲ್ ಬಿ.ಸಿ 87–42ರಿಂದ ಬೆಂಗಳೂರು ಸ್ಪೋರ್ಟಿಂಗ್ ಬಿ.ಸಿ ಎದುರು ಜಯ ಗಳಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.