ನವದೆಹಲಿ: ಪ್ರತಿಭಾನ್ವಿತ ಆಟಗಾರ ಮಯಂಕ್ ಚಕ್ರವರ್ತಿ ಅವರು ಸ್ಟಾಕ್ಹೋಮ್ ಟೂರ್ನಿಯಲ್ಲಿ ತಮ್ಮ ಮೂರನೇ ಹಾಗೂ ಅಂತಿಮ ಗ್ರ್ಯಾಂಡ್ಮಾಸ್ಟರ್ ನಾರ್ಮ್ ಪಡೆದರು. ಆ ಮೂಲಕ ದೇಶದ 94ನೇ ಹಾಗೂ ಈಶಾನ್ಯ ಭಾರತದ ಮೊದಲ ಗ್ರ್ಯಾಂಡ್ಮಾಸ್ಟರ್ ಎಂಬ ಗೌರವಕ್ಕೆ ಪಾತ್ರರಾದರು.

ಗುವಾಹಟಿಯ 17 ವರ್ಷ ವಯಸ್ಸಿನ ಚಕ್ರವರ್ತಿ 2024ರಲ್ಲಿ ಇಂಟರ್ನ್ಯಾಷನಲ್ ಮಾಸ್ಟರ್ ಆಗಿದ್ದರು. ಸ್ವೀಡನ್ನ ಹೋಟೆಲ್ ಸ್ಟಾಕ್ಹೋಮ್ ನಾರ್ತ್ ಟೂರ್ನಿಯ ಎಂಟನೇ ಸುತ್ತಿನಲ್ಲಿ ಅವರು ಆತಿಥೇಯ ದೇಶದ ಐಎಂ ಫಿಲಿಕ್ ಲಿಂಡ್ಗ್ರೆನ್ ಅವರನ್ನು ಸೋಲಿಸಿದರು. ಅದರೊಂದಿಗೆ ಒಟ್ಟು 6.5 ಪಾಯಿಂಟ್ಸ್ ಕಲೆಹಾಕಿದರು. ಅಂತಿಮ ಸುತ್ತಿನಲ್ಲಿ ಅವರು ಇಂಗ್ಲೆಂಡ್ನ ಜೊನಾ ಬಿ ವಿಲೊ ಅವರ ಜೊತೆ ಡ್ರಾ ಮಾಡಿಕೊಂಡರು. ಆ ಹಾದಿಯಲ್ಲಿ ಅವರ ರೇಟಿಂಗ್ 2,500 ದಾಟಿತು.

ಫಿಡೆ ನಿಯಮದ ಪ್ರಕಾರ ಒಬ್ಬ ಆಟಗಾರ ಗ್ರ್ಯಾಂಡ್ಮಾಸ್ಟರ್ ‘ಟೈಟಲ್’ ಪಡೆಯಬೇಕಾದರೆ, ಮೂರು ಜಿಎಂ ನಾರ್ಮ್ಗಳ ಜೊತೆಗೆ 2,500 ಇಎಲ್ಒ ಪಾಯಿಂಟ್ಗಳನ್ನು ಗಳಿಸಬೇಕಾಗುತ್ತದೆ.

ಚಕ್ರವರ್ತಿ ಅವರು 11 ವರ್ಷದೊಳಗಿನವರ ವಿಭಾಗದಲ್ಲಿ ಭಾರತದ ಮತ್ತು ಏಷ್ಯಾದ ಅಗ್ರ ಆಟಗಾರ ಎನಿಸಿದ್ದರು. 2021ರಲ್ಲಿ ಯುರೋಪ್ ಟೂರ್ನಿಗಳಲ್ಲಿ ಆಡಿದ್ದ ಅವರು ರೇಟಿಂಗ್ಅನ್ನು 1800 ರಿಂದ 2200ರ ಸಮೀಪ ತಲುಪಿಸಿ ಗಮನ ಸೆಳೆದಿದ್ದರು.

ತಾಯಿ ವೈದ್ಯೆಯಾಗಿದ್ದು, ಮಗನಿಗೆ ಚೆಸ್ ಆಸಕ್ತಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಮಗನ ಜೊತೆಗೆ ಟೂರ್ನಿಗಳಿಗೆ ತೆರಳಲು ತಂದೆ ತಮ್ಮ ಖಾಸಗಿ ಕಂಪನಿಯ ಉದ್ಯೋಗ ತ್ಯಜಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.