ಮೈಸೂರು: ನಗರದ ಬಾಕ್ಸರ್ಗಳು ಈಚೆಗೆ ಚೆನ್ನೈನಲ್ಲಿ ನಡೆದ ತಮಿಳುನಾಡು ಅಂತರರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ಪಾರಮ್ಯ ಮೆರೆದು 7 ಪದಕ ಗೆದ್ದರು.

ಟೂರ್ನಿಯಲ್ಲಿ 800 ಬಾಕ್ಸರ್ಗಳು ಸ್ಪರ್ಧಿಸಿದ್ದರು. 47–51 ಕೆ.ಜಿ ವಿಭಾಗದಲ್ಲಿ ಎಸ್.ಚೇತನಾ ಚಿನ್ನ ಗೆದ್ದರೆ, ಆರ್.ಮಹಾಲಕ್ಷ್ಮಿ (51-54 ಕೆ.ಜಿ), ವಿಷ್ಣುನಾಯಕ್ (35-37 ಕೆ.ಜಿ), ಎ.ಗಂಗದೀಪ್ (46-49 ಕೆ.ಜಿ) ಬೆಳ್ಳಿ ಗೆದ್ದರು.

ಧ್ಯಾನ್ ಬಾಲು (55-58 ಕೆ.ಜಿ), ಮೊಹಮ್ಮದ್ ಅಯಾನ್ (75-80 ಕೆ.ಜಿ), ಲಕ್ಷಿತ್ ಸಿಂಗ್ (65-70 ಕೆ.ಜಿ) ಕಂಚಿಗೆ ಕೊರಳೊಡ್ಡಿದರು. ಅಲ್ಲಿನ ಶಾಸಕ ಇಸಿಆರ್ ಶರವಣನ್ ಅವರು ಸನ್ಮಾನಿಸಿದರು. ಸ್ಪರ್ಧೆಯ ಆಯೋಜಕ ಮೋಹನ್, ಟಿಎನ್ಬಿಎ ಅಧ್ಯಕ್ಷ ಭಾಸ್ಕರನ್, ಎಂಡಿಎಬಿಎ ಕಾರ್ಯದರ್ಶಿ ಎಸ್.ಜಸ್ವಂತ್, ಸದಸ್ಯ ಎಚ್.ಕೆ.ಗುರುಪ್ರಸಾದ್ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-39-2069651737

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.