ಮೈಸೂರು: ಬೆಂಗಳೂರಿನ ಆದ್ಯ ಗೌಡ, ಶ್ರೇಯಾ ರಾಜೇಶ್ ಅವರು ಭಾನುವಾರ ಇಲ್ಲಿ ಮುಕ್ತಾಯಗೊಂಡ ಕರ್ನಾಟಕ ರಾಜ್ಯ 13 ವರ್ಷದೊಳಗಿನವರ ಚೆಸ್ ಟೂರ್ನಿಯ ಮುಕ್ತ ಹಾಗೂ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆದರು.

‘ಕರ್ನಾಟಕ ರಾಜ್ಯ ಚೆಸ್ ಸಂಸ್ಥೆ’ಯು ಮೈಸೂರು ಚೆಸ್ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಟೂರ್ನಿಯಲ್ಲಿ ನಡೆದ 9 ಸುತ್ತುಗಳಲ್ಲಿ ಪಾರಮ್ಯ ಮೆರೆದ ಈ ಇಬ್ಬರೂ ಆಟಗಾರ್ತಿಯರು ಕ್ರಮವಾಗಿ 8 ಮತ್ತು 7.5 ಅಂಕ ಗಳಿಸಿ ಟ್ರೋಫಿಗೆ ಮುತ್ತಿಟ್ಟರು.

ಮುಕ್ತ ವಿಭಾಗದಲ್ಲಿ ಸ್ಪರ್ಧಿಸಿದ್ದ 260 ಆಟಗಾರರನ್ನು ಹಿಂದಿಕ್ಕಿದ ಆದ್ಯ ಗೌಡ, ಸಮೀಪದ ಸ್ಪರ್ಧಿ ಇಶಾನ್ ಬನ್ಸಾಲಿ ಅವರಿಗಿಂತ ಅರ್ಧ ಅಂಕ ಹೆಚ್ಚು ಪಡೆದರು. ಬೆಂಗಳೂರಿನವರೇ ಆದ ಇಶಾನ್ (7.5) ರನ್ನರ್ಅಪ್ ಆದರು.

ಬಾಲಕಿಯರ ವಿಭಾಗದ ಸ್ಪರ್ಧೆಯಲ್ಲಿ ಇಂದೂ ಶೀತಲ್ ಅವರನ್ನು ಟೈಬ್ರೇಕರ್ನಲ್ಲಿ ಸೋಲಿಸಿದ ಬೆಂಗಳೂರು ನಗರದ ಶ್ರೇಯಾ ರಾಜೇಶ್ ಚಾಂಪಿಯನ್ ಆದರು. ಇಬ್ಬರೂ 9 ಸುತ್ತುಗಳಿಂದ ತಲಾ 7.5 ಪಾಯಿಂಟ್ ಗಳಿಸಿದ್ದರು.

ಎರಡೂ ವಿಭಾಗದ ನಾಲ್ವರು ವಿಜೇತರಿಗೆ ₹ 1 ಲಕ್ಷ ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಯಿತು. ಇವರು ಸೆಪ್ಟೆಂಬರ್ನಲ್ಲಿ ಪುದುಚೇರಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-43-250867351

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.