ರಾಂಚಿ : ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ಸ್ ಫೆಡರೇಷನ್ ಸ್ಪರ್ಧೆಯ ಮೊದಲ ದಿನವಾದ ಶುಕ್ರವಾರ ಪುರುಷರ 100 ಮೀಟರ್ ಓಟದ ರಾಷ್ಟ್ರೀಯ ದಾಖಲೆಯು ಎರಡು ಬಾರಿ ಬದಲಾಯಿತು.

ಮೊದಲ ಸೆಮಿಫೈನಲ್ ಹೀಟ್ಸ್ನಲ್ಲಿ ರಿಲಯನ್ಸ್ ತಂಡದ ಗುರಿಂದರ್ವೀರ್ ಸಿಂಗ್ ಅವರು 10.17 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಅನಿಮೇಶ್ ಕುಜೂರ್ (10.18ಸೆ) ಅವರು 10 ತಿಂಗಳ ಹಿಂದೆ ನಿರ್ಮಿಸಿದ್ದ ರಾಷ್ಟ್ರೀಯ ದಾಖಲೆಯನ್ನು ಮುರಿದರು.

ಅದಾದ ಕೆಲವೇ ನಿಮಿಷದಲ್ಲಿ ನಡೆದ ಎರಡನೇ ಸೆಮಿಫೈನಲ್ ಹೀಟ್ಸ್ನಲ್ಲಿ ಅನಿಮೇಶ್ 10.15 ಸೆಕೆಂಡುಗಳಲ್ಲಿ ಓಡಿ, ತನ್ನ ದಾಖಲೆಯನ್ನು ಮರಳಿ ಪಡೆದರು. ಶನಿವಾರ ನಡೆಯುವ ಫೈನಲ್ನಲ್ಲಿ ಗುರಿಂದರ್ವೀರ್ ಮತ್ತು ಅನಿಮೇಶ್ ಇಬ್ಬರೂ ಕಣಕ್ಕಿಳಿಯಲಿದ್ದಾರೆ.

ಒಡಿಶಾವನ್ನು ಪ್ರತಿನಿಧಿಸುವ ಅನಿಮೇಶ್ ಅವರು 2026ರ ಕಾಮನ್ವೆಲ್ತ್ ಕ್ರೀಡಾಕೂಟಕ್ಕೂ ಅರ್ಹತೆ ಸಂಪಾದಿಸಿದ್ದಾರೆ. ಅವರು ಭಾರತ ಅಥ್ಲೆಟಿಕ್ಸ್ ಫೆಡರೇಷನ್ (ಎಎಫ್ಐ) ನಿಗದಿಪಡಿಸಿದ್ದ ಅರ್ಹತಾ ಮಾನದಂಡ (10.16 ಸೆ) ದಾಟಿದ್ದಾರೆ.

ಬೆಳಗಿನ ಅವಧಿಯಲ್ಲಿ ಉತ್ತರಾಖಂಡದ ದೀಪಕ್ ಭಟ್ ಅವರು ಪುರುಷರ 10,000 ಮೀ ಓಟವನ್ನು 29 ನಿಮಿಷ 42.93 ಸೆಕೆಂಡುಗಳಲ್ಲಿ ತಲುಪಿ ಪ್ರಶಸ್ತಿ ಗೆದ್ದರು. ಕರ್ನಾಟಕದ ಅಥ್ಲೀಟ್ ಶಿವಾಜಿ ಎಂ. ಅವರು ಸ್ಪರ್ಧೆಯ ವೇಳೆ ನಿರ್ಜಲೀಕರಣದಿಂದ ಬಳಲುತ್ತಿದ್ದರು. ತಂಡದ ತರಬೇತುದಾರರು ಅವರ ನೆರವಿಗೆ ಧಾವಿಸಿದರು.

ಮಹಾರಾಷ್ಟ್ರದ ರವಿನಾ ಗಾಯಕವಾಡ್ ಮಹಿಳೆಯರ 10,000 ಮೀಟರ್ ಓಟವನ್ನು 35 ನಿಮಿಷ 30.98 ಸೆಕೆಂಡ್ಗಳಲ್ಲಿ ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.