ಬೆಂಗಳೂರು: ಕರ್ನಾಟಕದ ಶಟ್ಲರ್ಗಳು ಹೈದರಾಬಾದ್ನಲ್ಲಿ ಮಂಗಳವಾರ ಮುಕ್ತಾಯವಾದ 7ನೇ ರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಎರಡು ಚಿನ್ನ ಸೇರಿ ಒಟ್ಟು 11 ಪದಕಗಳನ್ನು ಗೆದ್ದುಕೊಂಡರು.

ಪಲ್ಲವಿ ಕೆ.ಎಂ. ಅವರು ಮಹಿಳೆಯರ ವೀಲ್ಚೇರ್ ಸಿಂಗಲ್ಸ್ ಹಾಗೂ ಡಬಲ್ಸ್ನಲ್ಲಿ ಸ್ವರ್ಣ ಜಯಿಸಿದರು. ವೀಲ್ಚೇರ್ ಮಿಶ್ರ ಡಬಲ್ಸ್ನಲ್ಲಿ ರಜತ ಪದಕ ತಮ್ಮದಾಗಿಸಿಕೊಂಡರು. ಅಮ್ಮು ಮೋಹನ್ ಅವರು ಒಂದು ಬೆಳ್ಳಿ (ವೀಲ್ಚೇರ್ ಡಬಲ್ಸ್) ಹಾಗೂ ಎರಡು ಕಂಚು (ವೀಲ್ಚೇರ್ ಮಹಿಳಾ ಸಿಂಗಲ್ಸ್ ಮತ್ತು ವೀಲ್ಚೇರ್ ಮಿಶ್ರ ಡಬಲ್ಸ್) ಜಯಿಸಿದರು.

ಧಾನೇಶ್ವರಿ ಅವರು ವೀಲ್ಚೇರ್ ಮಹಿಳಾ ಡಬಲ್ಸ್ನಲ್ಲಿ ಬೆಳ್ಳಿ ಮತ್ತು ವೀಲ್ಚೇರ್ ಸಿಂಗಲ್ಸ್ನಲ್ಲಿ ಕಂಚು ತಮ್ಮದಾಗಿಸಿಕೊಂಡರು. ಜನನಿ ಆರ್. ಹಾಗೂ ಸಿದ್ಧಮ್ಮ ಸಾಹುಕಾರ್ ತಲಾ ಒಂದು ರಜತ ಗೆದ್ದರೆ, ಜಮ್ಶದ್ ಎಂ.ಇ. ಹಾಗೂ ಮಂಜುನಾಥ್ ಸಿ. ಅವರು ತಲಾ ಒಂದು ಕಂಚಿನ ಪದಕ ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.