ಪ್ರಯಾಗರಾಜ್ : ಕರ್ನಾಟಕದ ಪಾವನಾ ನಾಗರಾಜ್ ಅವರು ಇಲ್ಲಿ ನಡೆದ 23ನೇ ರಾಷ್ಟ್ರೀಯ ಜೂನಿಯರ್ (20 ವರ್ಷದೊಳಗಿನವರ) ಫೆಡರೇಷನ್ ಅಥ್ಲೆಟಿಕ್ಸ್ನ ಮಹಿಳೆಯರ ಲಾಂಗ್ಜಂಪ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದರು.

ಕೂಟದ ಕೊನೆಯ ದಿನವಾದ ಮಂಗಳವಾರ 19 ವರ್ಷ ವಯಸ್ಸಿನ ಪಾವನಾ 6.29 ಮೀಟರ್ ಸಾಧನೆ ಮೆರೆದರು. ಎನ್ಸಿಒಇ ತಿರುವನಂತಪುರದ ಮುಬಸ್ಸಿನಾ ಮೊಹಮ್ಮದ್ (6.15ಮೀ) ಮತ್ತು ಹರಿಯಾಣದ ಪರೀಕ್ಷಾ (5.87ಮೀ) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರು.

ಪುರುಷರ 400 ಮೀಟರ್ ಹರ್ಡಲ್ಸ್ನಲ್ಲಿ ಕರ್ನಾಟಕದ ಭೂಷಣ್ ಸುನಿಲ್ ಪಾಟೀಲ (52.21ಸೆ) ಬೆಳ್ಳಿ ಪದಕ ಜಯಿಸಿದರು. ಗುಜರಾತ್ನ ಮುರಾದ್ ಸಿರ್ಮನ್ (50.75ಸೆ) ಅವರು ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು. 2012ರಲ್ಲಿ ದುರ್ಗೇಶ್ ಕುಮಾರ್ ಪಾಲ್ ನಿರ್ಮಿಸಿದ್ದ (51.26 ಸೆಕೆಂಡ್) ದಾಖಲೆ ಮುರಿದರು. ಎನ್ಸಿಒಇ ಪಟಿಯಾಲದ ಅಮಿತ್ ಕುಮಾರ್ (52.37ಸೆ) ಕಂಚಿನ ಪದಕ ಜಯಿಸಿದರು.

ಮಹಿಳೆಯರ 400 ಮೀಟರ್ ಹರ್ಡಲ್ಸ್ನಲ್ಲಿ ಕರ್ನಾಟಕದ ಅಪೂರ್ವಾ ಆನಂದ ನಾಯಕ್ (1ನಿ.01.92ಸೆ) ಬೆಳ್ಳಿಯ ಸಾಧನೆ ಮಾಡಿದರು. ಎನ್ಸಿಒಇ ಪಟಿಯಾಲದ ತನು ಚೌಧರಿ (1ನಿ.01.09ಸೆ) ಮತ್ತು ದೆಹಲಿಯ ಹರ್ಷಿತಾ ಗೋಸ್ವಾಮಿ (1ನಿ.02.59ಸೆ) ಕ್ರಮವಾಗಿ ಚಿನ್ನ ಮತ್ತು ಕಂಚು ಗೆದ್ದರು.

ಮಹಿಳೆಯರ 5000 ಮೀಟರ್ ಓಟದಲ್ಲಿ ಎನ್ಇಸಿಇ ಬೆಂಗಳೂರಿನ ಪ್ರಿಯಾಂಕಾ ಓಕ್ಸಾ (17ನಿ.07.09ಸೆ) ಚಿನ್ನ ಗೆದ್ದರು. ಗುಜರಾತ್ನ ಶಿಲ್ಪಾ ದಿಹೋರಾ (17ನಿ.07.71ಸೆ) ಬೆಳ್ಳಿ ಮತ್ತು ಮಧ್ಯಪ್ರದೇಶದ ಸೋನಮ್ ಪರ್ಮಾರ್ (17ನಿ.11.60ಸೆ) ಕಂಚು ಜಯಿಸಿದರು.

ಉತ್ತರ ಪ್ರದೇಶದ ಅನುಷ್ಕಾ ಯಾದವ್ ಅವರು ಮಹಿಳೆಯರ ಹ್ಯಾಮರ್ ಥ್ರೋ ಸ್ಪರ್ಧೆಯಲ್ಲಿ 60.46 ಮೀಟರ್ ಸಾಧನೆಯೊಂದಿಗೆ ಕೂಟ ದಾಖಲೆ ನಿರ್ಮಿಸಿದರು. 2022ರಲ್ಲಿ ತಾನ್ಯಾ ಚೌಧರಿ ಸ್ಥಾಪಿಸಿದ್ದ (57.09 ಮೀಟರ್) ದಾಖಲೆಯನ್ನು ಹಿಂದಿಕ್ಕಿದರು. ಅನುಷ್ಕಾ ಅವರು ಫೆಬ್ರುವರಿಯಲ್ಲಿ ನಡೆದ ಉತ್ತರಾಖಂಡ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಅವರು 62.89 ಮೀಟರ್ ದೂರ ಹ್ಯಾಮರ್ ಎಸೆದು ಜೂನಿಯರ್ ರಾಷ್ಟ್ರೀಯ ದಾಖಲೆ ಬರೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.