ನವದೆಹಲಿ (ಪಿಟಿಐ): ಇದೇ 15ರಂದು ಆರಂಭವಾಗುವ ಎಫ್ಐಎಚ್ ಮಹಿಳಾ ಹಾಕಿ ನೇಷನ್ಸ್ ಕಪ್ ಟೂರ್ನಿಗೆ 20 ಆಟಗಾರ್ತಿಯರ ಭಾರತ ತಂಡವನ್ನು ಮಂಗಳವಾರ ಪ್ರಕಟಿಸಲಾಗಿದೆ. ಅನುಭವಿ ಆಟಗಾರ್ತಿ ಸಲೀಮಾ ಟೆಟೆ ಅವರು ತಂಡವನ್ನು ಮುನ್ನಡೆಸಲಿದ್ದಾರೆ.

ನಾಲ್ಕು ಸ್ನೇಹಪರ ಪಂದ್ಯಗಳ ಸರಣಿ ಆಡಲು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ತಂಡವನ್ನೇ ಬಹುತೇಕ ಉಳಿಸಿಕೊಳ್ಳ ಲಾಗಿದೆ. ಫಾರ್ವರ್ಡ್ ಆಟಗಾರ್ತಿಯರಾದ ಬಲಜೀತ್ ಕೌರ್ ಹಾಗೂ ಹೀನಾ ಬಾನೊ ಅವರನ್ನು ಕೈಬಿಡಲಾಗಿದೆ.

ಟೂರ್ನಿಯು ನ್ಯೂಜಿಲೆಂಡ್ನ ಆಕ್ಲೆಂಡ್ನಲ್ಲಿ ಇದೇ 15ರಿಂದ 21ರ ವರೆಗೆ ನಡೆಯಲಿದೆ. ಭಾರತ ತಂಡವು ಜಪಾನ್, ಅಮೆರಿಕ ಹಾಗೂ ಉರುಗ್ವೆ ತಂಡಗಳೊಂದಿಗೆ ಎ ಗುಂಪಿನಲ್ಲಿದೆ. ಆತಿಥೇಯ ನ್ಯೂಜಿಲೆಂಡ್, ಚಿಲಿ, ಕೊರಿಯಾ ಹಾಗೂ ಫ್ರಾನ್ಸ್ ತಂಡಗಳು ಬಿ ಗುಂಪಿನಲ್ಲಿವೆ.

ಭಾರತ ತಂಡವು ಇದೇ 15ರಂದು ಅಮೆರಿಕ ವಿರುದ್ಧ ಅಭಿಯಾನ ಆರಂಭಿಸ ಲಿದೆ. 16ರಂದು ಜಪಾನ್ ವಿರುದ್ಧ ಹಾಗೂ 18ರಂದು ಉರುಗ್ವೆ ಎದುರು ಸೆಣಸಲಿದೆ. ಈ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿ, ಪ್ರೊ ಲೀಗ್ಗೆ ಅರ್ಹತೆ ಪಡೆಯುವ ತವಕದಲ್ಲಿ ಭಾರತ ತಂಡವಿದೆ. ಈಚೆಗೆ, ಚಿಲಿ ಪ್ರವಾಸದಲ್ಲಿ 2–2 ಸಮಬಲ ಸಾಧಿಸಿದ್ದ ಭಾರತವು ಆಸ್ಟ್ರೇಲಿಯಾ ಸರಣಿಯನ್ನೂ 2–2ರಲ್ಲಿ ಸಮಬಲ ಮಾಡಿಕೊಂಡಿದೆ. ಬಲಿಷ್ಠ ತಂಡಗಳ ಎದುರು ಸ್ಥಿರ ಪ್ರದರ್ಶನ ತೋರಿರುವುದು ತಂಡದಆತ್ಮವಿಶ್ವಾಸ ಹೆಚ್ಚಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-4-31522137

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.