ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾವೆಲಿನ್‌ ಥ್ರೋನಲ್ಲಿ ವಿಶ್ವದ ನಂ.1 ಪಟ್ಟಕ್ಕೇರಿದ ಒಲಿಂಪಿಕ್ ಸಾಧಕ ನೀರಜ್ ಚೋಪ್ರಾ

Published 22 ಮೇ 2023, 14:57 IST
Last Updated 22 ಮೇ 2023, 14:57 IST
ಅಕ್ಷರ ಗಾತ್ರ

ನವದೆಹಲಿ: ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರು ವಿಶ್ವದ ನಂಬರ್‌ ಒನ್‌ ಜಾವೆಲಿನ್ ಎಸೆತಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

25 ವರ್ಷ ವಯಸ್ಸಿನ ನೀರಜ್‌ ಚೋಪ್ರಾ ಅವರು 1,455 ಅಂಕಗಳೊಂದಿಗೆ, ವಿಶ್ವದ ಜಾವೆಲಿನ್‌ ಎಸೆತಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 1,433 ಅಂಕ ಗಳಿಸಿರುವ ಗ್ರೆನಡಾದ ಆಂಡರ್ಸನ್ ಪೀಟರ್ಸ್ ಎರಡನೇ ಸ್ಥಾನದಲ್ಲಿದ್ದಾರೆ.

ಇದೇ ವೇಳೆ ಪಾಕಿಸ್ತಾನದ ಅರ್ಷದ್ ನದೀಮ್ ಐದನೇ ಶ್ರೇಯಾಂಕ ಪಡೆದಿದ್ದಾರೆ. ನೀರಜ್‌ ಚೋಪ್ರಾ ಅವರು, ಮೇ 4ರಂದು 88.67-ಮೀಟರ್ ಎಸೆತದೊಂದಿಗೆ ದೋಹಾ ಡೈಮಂಡ್ ಲೀಗ್‌ ಗೆದ್ದಿದ್ದರು. ಈ ಮೂಲಕ 2023ರ ಋತುವಿನಲ್ಲಿ ಶುಭಾರಂಭ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT