ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ಯಾರಿಸ್‌ನಿಂದ ಜರ್ಮನಿಗೆ ತೆರಳಿದ ಚೋಪ್ರಾ

Published : 12 ಆಗಸ್ಟ್ 2024, 16:31 IST
Last Updated : 12 ಆಗಸ್ಟ್ 2024, 16:31 IST
ಫಾಲೋ ಮಾಡಿ
Comments

ನವದೆಹಲಿ: ಭಾರತದ ಜಾವೆಲಿನ್ ಥ್ರೋ ಅಥ್ಲೀಟ್‌ ಅವರು ಪ್ಯಾರಿಸ್‌ನಿಂದ ಜರ್ಮನಿಗೆ ತೆರಳಿದ್ದಾರೆ. ಆದ್ದರಿಂದ ಭಾರತಕ್ಕೆ ಮರಳುವುದು ವಿಳಂಬವಾಗಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. 

ತಮ್ಮ ಗಾಯಕ್ಕೆ ಶಸ್ತ್ರಚಿಕಿತ್ಸೆಯ ಕುರಿತು ವೈದ್ಯರಿಂದ ಸಲಹೆ ಪಡೆಯಲು ನೀರಜ್ ಜರ್ಮನಿಗೆ ಹೋಗಿದ್ದಾರೆ. ಅವರು ಸುಮಾರು ಒಂದು ತಿಂಗಳ ನಂತರ ಭಾರತಕ್ಕೆ ಮರಳಬಹುದು ಎಂದು ಕುಟುಂಬದವರು ತಿಳಿಸಿದ್ದಾರೆ. 

ಈ ವಿಷಯವನ್ನು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಅಧಿಕಾರಿಗಳೂ ಖಚಿತಪಡಿಸಿದ್ದಾರೆ.

‘ಅವರು ಜರ್ಮನಿಯಲ್ಲಿ ವೈದ್ಯರನ್ನು ಭೇಟಿಯಾಗಲಿದ್ದಾರೆಂಬುದು ಗೊತ್ತು. ಆದರೆ, ಉಳಿದ ಯಾವುದೇ ಮಾಹಿತಿಗಳು ಗೊತ್ತಿಲ್ಲ’ ಎಂದು ನೀರಜ್ ಸಂಬಂಧಿಯೊಬ್ಬರು ಹೇಳಿದ್ದಾರೆ.

ಹೋದ ಜೂನ್‌ನಲ್ಲಿ ಫಿನ್ಲೆಂಡ್‌ನಲ್ಲಿ ನಡೆದಿದ್ದ ಪಾವೊ ನುರ್ಮಿ ಗೇಮ್ಸ್‌ನಲ್ಲಿ ಭಾಗವಹಿಸಿದ್ದ ನಂತರ ಚೋಪ್ರಾ ಅವರು , ಒಲಿಂಪಿಕ್ಸ್‌ ಮುಗಿದ ಮೇಲೆ ವೈದ್ಯರ ಬಳಿ ತೆರಳುವುದಾಗಿ ಹೇಳಿದ್ದರು. 

ತೊಡೆಸಂಧುವಿನ ಗಾಯದ ನೋವಿನಲ್ಲಿಯೇ ಅವರು 2023ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಒಲಿಂಪಿಕ್ಸ್‌ಗೂ ಮುನ್ನ ಕೆಲಕಾಲ ಅವರು ವಿಶ್ರಾಂತಿ ಪಡೆದಿದ್ದರು.  

ಇದೇ ಸೆಪ್ಟೆಂಬರ್ 14ರಂದು  ಬೆಲ್ಜಿಯಂನಲ್ಲಿ ಆರಂಭವಾಗಲಿರುವ ಡೈಮಂಡ್ ಲೀಗ್ ಫೈನಲ್‌ನಲ್ಲಿ ಸ್ಪರ್ಧಿಸುವ ಇಂಗಿತವನ್ನು ಚೋಪ್ರಾ ವ್ಯಕ್ತಪಡಿಸಿದ್ದರು. ಆದರೆ,  ವೈದ್ಯರು ನೀಡುವ ಸಲಹೆ ಮೇರೆಗೆ ಚೋಪ್ರಾ ಮುಂದಿನ ನಿರ್ಧಾರ ಕೈಗೊಳ್ಳುವರು ಎನ್ನಲಾಗಿದೆ. 

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 26 ವರ್ಷದ  ಚೋಪ್ರಾ ಅವರು ಬೆಳ್ಳಿ ಪದಕ ಜಯಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT