ಉಲಾನ್ಬಾತರ್ (ಮಂಗೋಲಿಯಾ), (ಪಿಟಿಐ): ನಿಖತ್ ಜರೀನ್, ಪ್ರಿಯಾ ಮತ್ತು ಪ್ರೀತಿ ಪವಾರ್ ಅವರು ಇಲ್ಲಿ ನಡೆಯುತ್ತಿರುವ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ಶುಕ್ರವಾರ ಸೆಮಿಫೈನಲ್ ಪ್ರವೇಶಿಸಿದರು. ಈ ಮೂಲಕ ಭಾರತಕ್ಕೆ ಕನಿಷ್ಠ ಮೂರು ಕಂಚಿನ ಪದಕಗಳನ್ನು ಖಚಿತಪಡಿಸಿದರು.

ಮಹಿಳೆಯರ 51 ಕೆ.ಜಿ ವಿಭಾಗದಕ್ವಾರ್ಟರ್ ಫೈನಲ್ನಲ್ಲಿ ನಿಖತ್ ಸಂಪೂರ್ಣ ಪ್ರಾಬಲ್ಯ ಮೆರೆದರು. ಮೊದಲ ಸುತ್ತಿನ ಆರ್ಎಸ್ಸಿ (ರೆಫರಿ ಸ್ಟಾಪ್ಸ್ ಸ್ಪರ್ಧೆ)ಯಲ್ಲಿ ಫಿಲಿಪೀನ್ಸ್ನ ಕ್ಸಿಯಾನ್ ಬಾಗುಹಿನ್ ವಿರುದ್ಧ ಗೆಲುವು ಸಾಧಿಸಿದರು. ಸೆಮಿಫೈನಲ್ನಲ್ಲಿ ಭಾರತದ ಸ್ಪರ್ಧಿಗೆ ಅವರಿಗೆ ಕಠಿಣ ಪೈಪೋಟಿ ಎದುರಾಗಿದೆ. 2024ರ ಒಲಿಂಪಿಕ್ ಚಾಂಪಿಯನ್, ಚೀನಾದ ವು ಯು ವಿರುದ್ಧ ಅವರು ಸೆಣಸಲಿದ್ದಾರೆ.

60 ಕೆ.ಜಿ ವಿಭಾಗದಲ್ಲಿ ಪ್ರಿಯಾ 4–1 ಅಂತರದಿಂದ ಚೀನಾದ ಚೆಂಗ್ಯು ಯಾಂಗ್ ಅವರನ್ನು ಸೋಲಿಸಿದರು. ಪ್ರಿಯಾ ನಾಲ್ಕರ ಘಟ್ಟದಲ್ಲಿ ಮಂಗೋಲಿಯಾದ ನಮುನ್ ಮಂಖೋರ್ ಎದುರಾಳಿಯಾಗಿದ್ದಾರೆ.

54 ಕೆ.ಜಿ ವಿಭಾಗದಲ್ಲಿ ಪ್ರೀತಿ 5–0 ಅಂತರದ ಸರ್ವಾನುಮತದ ತೀರ್ಪಿನಿಂದ ಮಂಗೋಲಿಯಾದ ಮುಂಗುನ್ ತ್ಸೆಟ್ಸೆಗ್ ಅವರನ್ನು ಮಣಿಸಿದರು. ಅವರು ಸೆಮಿಫೈನಲ್ನಲ್ಲಿ ದಕ್ಷಿಣ ಕೊರಿಯಾದ ಇಲ್ ಏಜಿ ಅವರನ್ನು ಎದುರಿಸುವರು.

ಆದರೆ, ಪುರುಷರ 70 ಕೆ.ಜಿ ವಿಭಾಗದಲ್ಲಿ ದೀಪಕ್ ಹೊರಬಿದ್ದರು. ಕ್ವಾರ್ಟರ್ ಫೈನಲ್ನಲ್ಲಿ ಅವರು 1-4 ಅಂತರದಿಂದ ಜೋರ್ಡಾನ್ನ ಜೆಯಾದ್ ಇಶಾಶ್ ವಿರುದ್ಧ ಸೋತು ನಿರಾಸೆ ಅನುಭವಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-51-860173606

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.