ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಕ್ಸಿಂಗ್‌ನಲ್ಲಿ ನಿಶಾಂತ್‌ ಸೋಲು: ಸ್ಕೋರಿಂಗ್ ವ್ಯವಸ್ಥೆ ಮೇಲೆ ಮೂಡಿದ ಅನುಮಾನ?

Published : 4 ಆಗಸ್ಟ್ 2024, 4:46 IST
Last Updated : 4 ಆಗಸ್ಟ್ 2024, 4:46 IST
ಫಾಲೋ ಮಾಡಿ
Comments

ಪ್ಯಾರಿಸ್: ಭಾರತದ ನಿಶಾಂತ್ ದೇವ್ 71 ಕೆ.ಜಿ ವಿಭಾಗದ ಪುರುಷರ ಬಾಕ್ಸಿಂಗ್ ಕ್ವಾರ್ಟರ್‌ಫೈನಲ್‌ನಲ್ಲಿ ಸೋತರು. ಇದೀಗ ಮಾಜಿ ಬಾಕ್ಸರ್ ವಿಜೇಂದರ್ ಸಿಂಗ್ ಮತ್ತು ನಟ ರಣದೀಪ್ ಹೂಡಾ ಅವರು ಪಂದ್ಯದಲ್ಲಿನ ಸ್ಕೋರಿಂಗ್ ವ್ಯವಸ್ಥೆಯನ್ನು ಪ್ರಶ್ನಿಸಿದ್ದಾರೆ.

23 ವರ್ಷದ ನಿಶಾಂತ್ ಅವರು 1–4ರಿಂದ ಮೆಕ್ಸಿಕೊದ ಮಾರ್ಕೊ ವೆರ್ಡೆ ವಿರುದ್ಧ ಸೋತರು. ಇದರಿಂದಾಗಿ ಭಾರತಕ್ಕೆ ಮತ್ತೊಂದು ಪದಕ ಕೈತಪ್ಪಿತು. 

ಇದೀಗ ಈ ಪಂದ್ಯದ  ಸ್ಕೋರಿಂಗ್ ವ್ಯವಸ್ಥೆಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶ್ನೆ ಮಾಡಲಾಗುತ್ತಿದೆ. ನಿಶಾಂತ್‌ ಉತ್ತಮವಾಗಿ ಆಡಿದರು, ಆದರೆ ಅವರಿಗೆ ಪಾಯಿಂಟ್‌ ಕೊಡಲಿಲ್ಲ ಎಂದು ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. 

ನಿಶಾಂತ್ ಮೊದಲ ಎರಡು ಸುತ್ತುಗಳಲ್ಲಿ ಹೆಚ್ಚು ಪ್ರಾಬಲ್ಯ ಹೊಂದಿದ್ದರು. ಆದರೆ ಮುಂದಿನ ಎರಡು ಸುತ್ತುಗಳಲ್ಲಿ, ತೀರ್ಪುಗಾರರು ವರ್ಡೆ ಅವರನ್ನು ವಿಜೇತರೆಂದು ಘೋಷಿಸಿದರು. ಒಟ್ಟಾರೆ ಸ್ಕೋರಿಂಗ್‌ ವ್ಯವಸ್ಥೆ ಸರಿ ಇರಲಿಲ್ಲ ಎಂದು ಹಲವರು ಹೇಳಿದ್ದಾರೆ.

ಸ್ಕೋರಿಂಗ್ ವ್ಯವಸ್ಥೆ ಏನು ಎಂದು ನನಗೆ ತಿಳಿದಿಲ್ಲ, ಆದರೆ ನಿಶಾಂತ್‌ ಅವರ ಹೋರಾಟ ಗೆಲುವಿಗೆ ತುಂಬಾ ಹತ್ತಿರವಾಗಿತ್ತು. ಅವರು ಚೆನ್ನಾಗಿ ಆಡಿದರು ಎಂದು ಮಾಜಿ ಬಾಕ್ಸರ್‌ ವಿಜೇಂದರ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ನಿಶಾಂತ್‌ ಈ ಪಂದ್ಯವನ್ನು ಗೆದ್ದರು. ಜೊತೆಗೆ ಎಲ್ಲರ ಹೃದಯ ಗೆದ್ದರು. ಆದರೆ ಸ್ಕೋರಿಂಗ್‌ ವ್ಯವಸ್ಥೆ ಸರಿ ಇರಲಿಲ್ಲ ಎಂದು ನಟ ರಣದೀಪ್‌ ಹೂಡ ಹೇಳಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT