ಓಸ್ಲೊ: ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ಅವರಿಗೆ ಮೂರನೇ ಸುತ್ತಿನಲ್ಲಿ ಆಘಾತ ನೀಡುವ ಮೂಲಕ ಆರ್.ಪ್ರಜ್ಞಾನಂದ ಅವರು ತಮ್ಮ ಉತ್ತುಂಗದ ಆಟಕ್ಕೆ ಮರಳುವ ಸಂಕೇತಗಳನ್ನು ರವಾನಿಸಿದರು. ಪೂರ್ಣ ಮೂರು ಪಾಯಿಂಟ್ಗಳನ್ನು ಗಳಿಸಿದ ‘ಪ್ರಗ್ಗು’ 4.5 ಪಾಯಿಂಟ್ಗಳೊಂದಿಗೆ ಎರಡನೇ ಸ್ಥಾನಕ್ಕೇರಿದರು.

ಆದರೆ ವಿಶ್ವ ಚಾಂಪಿಯನ್ ಗುಕೇಶ್ ಅವರ ಆಟದ ಮಟ್ಟ ಕಳವಳ ಹುಟ್ಟಿಸುವ ರೀತಿಯಲ್ಲಿ ಕುಸಿಯುತ್ತಿದೆ. ಅಮೋಘ ಆಟವಾಡುತ್ತಿರುವ ಫ್ರಾನ್ಸ್ನ ಅಲಿರೇಝಾ ಫಿರೋಝ್ಜಾ ಅವರು ಬುಧವಾರ ರಾತ್ರಿ ಭಾರತದ ಆಟಗಾರನನ್ನು ‘ಆರ್ಮ್ಗೆಡನ್’ನಲ್ಲಿ ಸೋಲಿಸಿದರು. ಕ್ಲಾಸಿಕಲ್ ಪಂದ್ಯದ ಒಂದು ಹಂತದಲ್ಲಿ ಅಲಿರೇಝಾ ತೊಂದರೆ ಸಿಲುಕಿದ್ದರೂ ಪಾರಾಗಿ ಡ್ರಾ ಮಾಡಿಕೊಂಡಿದ್ದರು.

ಈ ಪಂದ್ಯದಲ್ಲಿ ಒಂದೂವರೆ ಪಾಯಿಂಟ್ ಸೇರಿದಂತೆ ಅಲಿರೇಝಾ ಮೂರು ಸುತ್ತುಗಳ ನಂತರ 7.5 ಪಾಯಿಂಟ್ಸ್ ಕಲೆಹಾಕಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಗುಕೇಶ್ (3.5) ನಾಲ್ಕನೇ ಸ್ಥಾನದಲ್ಲಿದ್ದಾರೆ. ವಿಶ್ವ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು ಈ ವರ್ಷದ ಕೊನೆಯಲ್ಲಿ ಉಜ್ಬೇಕ್ ಆಟಗಾರ ಜಾವೋಖಿರ್ ಸಿಂದರೋವ್ ಅವರನ್ನು ಎದುರಿಸಲಿರುವ ಗುಕೇಶ್ ಅವರಿಗೆ ಈ ಹಿನ್ನಡೆ ತಲೆನೋವಾಗಿದೆ.

ಈ ಬಾರಿಯ ಆವೃತ್ತಿಯಲ್ಲಿ ಕಾರ್ಲ್ಸನ್ ಅವರ ಹಿನ್ನಡೆ ಮುಂದುವರಿಯಿತು. ಏಳು ಬಾರಿಯ ಚಾಂಪಿಯನ್ ಆಟಗಾರ ವಿರಳ ಎಂಬಂತೆ ಕೊನೆಯ ಸ್ಥಾನದಲ್ಲಿ ಮುಂದುವರಿದಿದ್ದಾರೆ. ತವರಿನಲ್ಲಿ ಅವರನ್ನು ಸೋಲಿಸುವುದು ಪ್ರಯಾಸದ ಕೆಲಸ. ಪ್ರಜ್ಞಾನಂದ ಇದನ್ನು ಎರಡನೇ ಬಾರಿ ಸಾಧಿಸಿದರು. 2024ರ ಆವೃತ್ತಿಯಲ್ಲೂ ಚೆನ್ನೈನ ಆಟಗಾರ, ಐದು ಬಾರಿಯ ವಿಶ್ವ ಚಾಂಪಿಯನ್ ಕಾರ್ಲ್ಸನ್ ಅವರನ್ನು ಸೋಲಿಸಿದ್ದರು.

ವಾರದ ಹಿಂದೆ ರೊಮೇನಿಯಾದಲ್ಲಿ ಆಡುವಾಗ ಎಡವಿ ಪಾದದ ನೋವಿಗೆ ಒಳಗಾಗಿರುವ ಅಲಿರೇಝಾ ಇಲ್ಲಿ ಗಾಲಿಕುರ್ಚಿಯಲ್ಲಿ ಬರುತ್ತಿದ್ದಾರೆ. ‘ಮೂನ್ ಬೂಟ್’ (ಒಳಗೆ ಪ್ಯಾಡ್ಗಳಿರುವ ದೊಡ್ಡ ಗಾತ್ರದ ಬೂಟು) ಧರಿಸುತ್ತಿದ್ದಾರೆ.

ಅಮೆರಿಕದ ವೆಸ್ಲಿ ಸೊ (4) ಇನ್ನೊಂದು ಪಂದ್ಯದಲ್ಲಿ ಜರ್ಮನಿಯ ವಿನ್ಸೆಂಟ್ ಕೀಮರ್ (3) ಅವರನ್ನು ಮಣಿಸಿದರು.

ಮಹಿಳೆಯರ ವಿಭಾಗದಲ್ಲಿ ತೀವ್ರ ಪೈಪೋಟಿ ಮುಂದುವರಿದಿದೆ. ದಿವ್ಯಾ ದೇಶಮುಖ್ ಮತ್ತೊಮ್ಮೆ ಒತ್ತಡದ ಸನ್ನಿವೇಶವನ್ನು ಸಮರ್ಥವಾಗಿ ನಿಭಾಯಿಸಿ ಮೂರನೇ ಪಂದ್ಯವನ್ನು ಆರ್ಮ್ಗೆಡನ್ನಲ್ಲಿ ಗೆದ್ದುಕೊಂಡು. ಈ ಬಾರಿ ಅವರು ಅಗ್ರಸ್ಥಾನದಲ್ಲಿರುವ ಬಿಬಿಸಾರಾ ಅಸೌಬಯೇವ (5.5) ಅವರನ್ನು ಮಣಿಸಿದರು. ದಿವ್ಯಾ ಬಳಿ 4.5 ಪಾಯಿಂಟ್ಗಳಿದ್ದು ಎರಡನೇ ಸ್ಥಾನದಲ್ಲಿದ್ದಾರೆ.

ಎರಡು ಬಾರಿಯ ವಿಶ್ವ ರ್ಯಾಪಿಡ್ ಚಾಂಪಿಯನ್ ಕೋನೇರು ಹಂಪಿ (2) ಅವರು ಹಿನ್ನಡೆ ಮುಂದುವರಿಯಿತು. ಅವರು ಹಾಲಿ ಚಾಂಪಿಯನ್ ಅನ್ನ ಮುಝಿಚುಕ್ (4) ಅವರಿಗೆ ಸೋತರು. ಹಂಪಿ ಕೊನೆಯ ಸ್ಥಾನದಲ್ಲಿದ್ದಾರೆ.

ವಿಶ್ವ ಚಾಂಪಿಯನ್, ಚೀನಾದ ಜು ವೆನ್ಜುನ್ (3) ಅವರು ಸ್ವದೇಶದ ಝ ಜಿನೆರ್ (4) ಅವರಿಗೆ ಶರಣಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.