ಓಸ್ಲೊ: ಭಾರತದ ನಾಲ್ಕೂ ಮಂದಿ, ನಾರ್ವೆ ಚೆಸ್ ಟೂರ್ನಿಯ ಆರನೇ ಸುತ್ತಿನಲ್ಲಿ ಭಾನುವಾರ ಸೋಲನುಭವಿಸಿದರು. ಈ ಹಿಂದಿನ ಸುತ್ತಿನಲ್ಲಿ ಗೆಲುವಿನ ಹಳಿಗೆ ಮರಳಿದ್ದ ವಿಶ್ವ ಚಾಂಪಿಯನ್ ಗುಕೇಶ್ ಮತ್ತೆ ನಿರಾಶೆ ಅನುಭವಿಸಿದರು. ಅವರ ಜೊತೆಗೆ ಪ್ರಜ್ಞಾನಂದ ಆರ್,, ಮಹಿಳೆಯರ ವಿಭಾಗದಲ್ಲಿ ದಿವ್ಯಾ ದೇಶಮುಖ್, ಕೋನೇರು ಹಂಪಿ ಹಿನ್ನಡೆ ಕಂಡರು.

ಹಾಲಿ ಚಾಂಪಿಯನ್ ಹಾಗೂ ವಿಶ್ವದ ನಂಬರ್ ವನ್ ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ಸಕಾಲದಲ್ಲಿ ಲಯಕ್ಕೆ ಮರಳುತ್ತಿದ್ದು, ಐದನೇ ಸುತ್ತಿನವರೆಗೆ ಅಗ್ರಸ್ಥಾನದಲ್ಲಿದ್ದ ಫ್ರಾನ್ಸ್ನ ಅಲಿರೇಝಾ ಫಿರೋಝ್ಜಾ (10) ಅವರಿಗೆ ಸೋಲುಣಿಸಿದರು. ಆತಿಥೇಯ ನಾರ್ವೆಯ ಆಟಗಾರ ಈಗ ಏಳೂವರೆ ಅಂಕ ಕಲೆಹಾಕಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಅಮೆರಿಕದ ವೆಸ್ಲಿ ಸೊ (11.5) ಅವರು ಪ್ರಜ್ಞಾನಂದ (6) ಅವರನ್ನು ಕ್ಲಾಸಿಕಲ್ ಪಂದ್ಯದಲ್ಲಿ ಮಣಿಸುವ ಮೂಲಕ ಪೂರ್ಣ ಮೂರು ಅಂಕ ಬಾಚಿ ಅಗ್ರಸ್ಥಾನಕ್ಕೇರಿದರು. ಜರ್ಮನಿಯ ವಿನ್ಸೆಂಟ್ ಕೀಮರ್ (8) ಅವರು ಗುಕೇಶ್ (6.5) ಅವರನ್ನು ಸೋಲಿಸಿದರು. ಇನ್ನು ನಾಲ್ಕು ಸುತ್ತುಗಳಷ್ಟೇ ಉಳಿದಿವೆ.

ದಿವ್ಯಾಗೆ ನಿರಾಸೆ: ಐದನೇ ಸುತ್ತಿನ ನಂತರ ಅಗ್ರಸ್ಥಾನದಲ್ಲಿದ್ದ ವಿಶ್ವ ಕಪ್ ವಿಜೇತೆ ದಿವ್ಯಾ ದೇಶಮುಖ್ (8.5) ಅವರು ಐದು ಬಾರಿಯ ವಿಶ್ವ ಚಾಂಪಿಯನ್, ಚೀನಾದ ಜು ವೆನ್ಜುನ್ ಅವರಿಗೆ (8) ಸೋತರು.

ಕಜಾಕಸ್ಥಾನದ ಬಿಬಿಸಾರ ಅಸೌಬಯೇವಾ (9.5) ಇನ್ನೊಂದು ಪಂದ್ಯದಲ್ಲಿ ಕೋನೇರು ಹಂಪಿ (5) ಅವರನ್ನು ಸೋಲಿಸಿ ಅಗ್ರಸ್ಥಾನಕ್ಕೇರಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-43-277996656

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.