ಓಸ್ಲೊ (ಪಿಟಿಐ): ವಿಶ್ವ ಚಾಂಪಿಯನ್ ಡಿ.ಗುಕೇಶ್, ಆರ್.ಪ್ರಜ್ಞಾನಂದ ಅವರು ನಾರ್ವೆ ಚೆಸ್ ಟೂರ್ನಿಯ ಏಳನೇ ಸುತ್ತಿನಲ್ಲಿ ನಿರ್ಣಾಯಕ ಗೆಲುವಿ ನೊಡನೆ ಪ್ರಶಸ್ತಿ ಆಸೆ ಜೀವಂತವಾಗಿರಿಸಿ ಕೊಂಡರು. ಮಹಿಳೆಯರ ವಿಭಾಗದಲ್ಲಿ ವಿಶ್ವಕಪ್ ಚಾಂಪಿಯನ್ ದಿವ್ಯಾ ದೇಶಮುಖ್, ಸ್ವದೇಶದ ಕೋನೇರು ಹಂಪಿ ಅವರನ್ನು ಮಣಿಸಿದರು.

ಡಬಲ್ ರೌಂಡ್ರಾಬಿನ್ ಲೀಗ್ ಮಾದರಿಯ ಈ ಟೂರ್ನಿಯಲ್ಲಿ ಇನ್ನು ಮೂರು ಸುತ್ತಿನ ಪಂದ್ಯಗಳಷ್ಟೇ ಉಳಿದಿವೆ. ಈ ಹಿಂದಿನ ಸುತ್ತಿನಲ್ಲಿ ಸೋಲನುಭವಿಸಿದ್ದ ಗುಕೇಶ್, ಸೋಮ ವಾರ ನಡೆದ ಏಳನೇ ಸುತ್ತಿನ ಪಂದ್ಯದಲ್ಲಿ ಅಮೆರಿಕದ ವೆಸ್ಲಿ ಸೊ ಅವರನ್ನು ‘ಆರ್ಮ್ಗೆಡನ್’ನಲ್ಲಿ ಮಣಿಸಿದರು.

ಈ ಸೋಲಿನ ಹೊರತಾಗಿಯೂ ಸೊ 12.5 ಅಂಕಗಳೊಡನೆ ಅಗ್ರಸ್ಥಾನದಲ್ಲೇ ಮುಂದುವರಿದ್ದಾರೆ. ಆರು ಆಟಗಾರರ ಟೂರ್ನಿಯಲ್ಲಿ ಗುಕೇಶ್ ಎಂಟು ಪಾಯಿಂಟ್ಸ್ ಸಂಗ್ರಹಿಸಿದ್ದು ಕೊನೆಯ ಸ್ಥಾನದಲ್ಲಿದ್ದಾರೆ.

ಇದೇ ವೇಳೆ ಪ್ರಜ್ಞಾನಂದ (9 ಅಂಕ) ಅವರು ಫ್ರೆಂಚ್ ಗ್ರ್ಯಾಂಡ್ಮಾಸ್ಟರ್ ಅಲಿರೇಝಾ ಫಿರೋಝ್ಜಾ ಅವರನ್ನು ಮಣಿಸಿದರು. ಐದನೇ ಸುತ್ತಿನವರೆಗೆ ಮುನ್ನಡೆಯಲ್ಲಿದ್ದ ಇರಾನ್ ಮೂಲದ ಅಲಿರೇಝಾ (10 ಅಂಕ) ಅವರಿಗೆ ಇದು ಸತತ ಎರಡನೇ ‘ಕ್ಲಾಸಿಕಲ್’ ಸೋಲು. ಅವರು ಎರಡನೇ ಸ್ಥಾನದಲ್ಲಿದ್ದಾರೆ.

ವಿಶ್ವದ ಅಗ್ರ ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ (9), ಇನ್ನೊಂದು ಪಂದ್ಯದಲ್ಲಿ ಜರ್ಮನಿಯ ವಿನ್ಸೆಂಟ್ ಕೀಮರ್ (9) ಅವರನ್ನು ‘ಆರ್ಮ್ಗೆಡನ್’ ಮೂಲಕ ಮಣಿಸಿದರು. ಪ್ರಜ್ಞಾನಂದ, ಹಾಲಿ ಚಾಂಪಿಯನ್ ಕಾರ್ಲ್ಸನ್ ಮತ್ತು ಕೀಮರ್ ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ.

ದಿವ್ಯಾಗೆ ಮಣಿದ ಹಂಪಿ: ಮಹಿಳೆಯರ ವಿಭಾಗದಲ್ಲಿ ಭಾರತದ ದಿವ್ಯಾ ಏಳನೇ ಸುತ್ತಿನ ಕ್ಲಾಸಿಕಲ್ ಪಂದ್ಯದಲ್ಲಿ ಹಂಪಿ (6.5) ಜೊತೆ ಡ್ರಾ ಮಾಡಿದರೂ ಆರ್ಮ್ಗೆಡನ್ನಲ್ಲಿ ಗೆದ್ದರು. ಅವರು 10 ಪಾಯಿಂಟ್ಸ್ ಕಲೆಹಾಕಿದ್ದು ಎರಡನೇ ಸ್ಥಾನದಲ್ಲಿದ್ದಾರೆ. ಕಜಾಕಸ್ತಾನದ ಬಿಬಿಸಾರ ಅಸೌಬಯೇವಾ (12.5) ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-4-1704510356

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.