ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಆರ್‌ಜೆ ರಾಜ್ಯ ಈಜು: ಅನೀಷ್, ನೀನಾ ಪ್ರಥಮ

Published 1 ಜೂನ್ 2023, 1:32 IST
Last Updated 1 ಜೂನ್ 2023, 1:32 IST
ಅಕ್ಷರ ಗಾತ್ರ

ಬೆಂಗಳೂರು: ಆತಿಥೇಯ ಬಸವನಗುಡಿ ಈಜು ಕೇಂದ್ರದ ಅನೀಷ್ ಎಸ್ ಗೌಡ ಮತ್ತು ಡಾಲ್ಫಿನ್ ಅಕ್ವೆಟಿಕ್ ಕೇಂದ್ರದ ನೀನಾ ವೆಂಕಟೇಶ್ ಅವರು ಎನ್‌.ಆರ್‌.ಜೆ. ರಾಜ್ಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ 100 ಮೀ ಫ್ರೀಸ್ಟೈಲ್‌ನಲ್ಲಿ ಪ್ರಥಮ ಸ್ಥಾನ ಗಳಿಸಿದರು.

ಸ್ಪರ್ಧೆಯ ಎರಡನೇ ದಿನವಾದ ಬುಧವಾರ ಪುರುಷರ 100 ಮೀ ಫ್ರೀಸ್ಟೈಲ್‌ನಲ್ಲಿ ಅನಿಷ್ 51.69 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಮಹಿಳೆಯರ ವಿಭಾಗದಲ್ಲಿ ನೀನಾ 59.21 ಸೆಕೆಂಡುಗಳಲ್ಲಿ ಮೊದಲ ಸ್ಥಾನಕ್ಕೆ ಲಗ್ಗೆಯಿಟ್ಟರು.

ಬಾಲಕರ ಮೊದಲ ಗುಂಪಿನ  200 ಮೀ ಮೆಡ್ಲೆ ಹಾಗೂ 50 ಮೀ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಬೆಂಗಳೂರು ಈಜು ಅಕಾಡೆಮಿಯ ಜಸ್ ಸಿಂಗ್ ಮೊದಲ ಸ್ಥಾನ ಗಳಿಸಿದರು.

200 ಮೀ ಮೆಡ್ಲೆಯಲ್ಲಿ ನೆಟ್ಟಕಲ್ಲಪ್ಪ ಅಕ್ವೆಟಿಕ್ ಸೆಂಟರ್‌ನ ಚಕ್ಷು ಗೌಡ ಸಿ.ಎಸ್  (2ನಿ, 48.33ಸೆ) ಎರಡನೇ ಸ್ಥಾನ ಗಳಿಸಿದರು. 50 ಮೀ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿಯೂ ನೆಟ್ಟಕಲ್ಲಪ್ಪ ಅಕ್ವೆಟಿಕ್ ಸೆಂಟರ್‌ನ ಚೇತನ್ ನಾಗರಾಜ ಗಣಪ  ಎರಡನೇ ಸ್ಥಾನ ಪಡೆದರು. 

ಬಾಲಕಿಯರ  50 ಮೀ ಬ್ರೆಸ್ಟ್‌ಸ್ಟ್ರೋಕ್ ವಿಭಾಗದಲ್ಲಿ ಡಾಲ್ಫಿನ್ ಕ್ಲಬ್‌ನ ವಿಭಾ ರೆಡ್ಡಿ ಮರಮ್ ( 41.20ಸೆ) ಪ್ರಥಮ ಸ್ಥಾನ ಗಳಿಸಿದರು.  ನೆಟ್ಟಕಲ್ಲಪ್ಪ ಅಕ್ವೆಟಿಕ್ ಸೆಂಟರ್ ಹನ್ಸಿಕಾ ರೆಡ್ಡಿ (42.19ಸೆ) ದ್ವಿತೀಯ ಹಾಗೂ ಬೆಳಗಾವಿಯ ಸ್ವಿಮ್ಮರ್ಸ್ ಕ್ಲಬ್‌ನ  ಅನಿಕಾ ಹಲಗೇಕರ್ (43.44ಸೆ) ಮೂರನೇ ಸ್ಥಾನಪಡೆದರು.

ಫಲಿತಾಂಶಗಳು

ಪುರುಷರು

100 ಮೀ ಫ್ರೀಸ್ಟೈಲ್: ಅನೀಷ್ ಎಸ್ ಗೌಡ (ಬಸವನಗುಡಿ ಈಜುಕೇಂದ್ರ; 51.69ಸೆ)–1, ತನಿಷ್ ಜಾರ್ಜ್ ಮ್ಯಾಥ್ಯೂ (ಬಸವನಗುಡಿ)–2, ಆರ್. ಸಂಭವ್ (ಡಾಲ್ಫಿನ್)–3. 

200 ಮೀ ಮೆಡ್ಲೆ: ಶಾನ್ ಗಂಗೂಲಿ (ಕಾಲ: 2ನಿ,09.09ಸೆ) –1, ಎಸ್. ಶಿವಾ –2, ಕಲ್ಪ ಎಸ್ ಬೋರಾ –3 (ಮೂವರು ಬಸವನಗುಡಿ ಈಜುಕೇಂದ್ರ) 

50 ಮೀ ಬ್ರೆಸ್ಟ್‌ಸ್ಟ್ರೋಕ್: ಡಿ.ಎಸ್. ಪೃಥ್ವಿಕ್ (ಬಸವನಗುಡಿ; 29.32ಸೆ)–1, ಕಲ್ಪ್ ಎಸ್ ಬೊರಾ(ಬಸವನಗುಡಿ)–2, ಪ್ರಗುನ್ ದೇವ್ (ಡಾಲ್ಫಿನ್)–3

ಬಾಲಕರು

ಗುಂಪು 1: 200 ಮೀ ಮೆಡ್ಲೆ: ನವನೀತ್‌ ಆರ್ ಗೌಡ (ಡಾಲ್ಫಿನ್; 2ನಿ, 15.89ಸೆ)–1, ವಿದಿತ್ ಎಸ್. ಶಂಕರ್ (ಡಾಲ್ಫಿನ್)–2, ಪವನ್ ಧನಂಜಯ (ಬಸವನಗುಡಿ)–3.

100 ಮೀ ಫ್ರೀಸ್ಟೈಲ್: ಎಸ್‌. ವಿಶ್ವನಾಥ (ಪಿ.ಎಂ ಈಜುಕೇಂದ್ರ; 53.49ಸೆ)–1, ಕಾರ್ತಿಕೆಯನ್ ನಾಯರ್ (ಡಾಲ್ಫಿನ್)–2, ರಿಷಭ್ ಸಿಂಗ್ ದದ್ವಾಲ್ (ಡಾಲ್ಫಿನ್)–3.

800 ಮೀ ಫ್ರೀಸ್ಟೈಲ್: ಪೃಥ್ವಿರಾಜ್ ಮೆನನ್ (ಬಸವನಗುಡಿ; 9ನಿ, 08ಸೆ)–1, ಪಿ.ವಿ. ಮೊನಿಷ್ (ಬಸವನಗುಡಿ)–2, ಇದಾಂತ್ ಶಾಶ್ವತ್ ಚತುರ್ವೇದಿ (ಪಿ.ಎಂ. ಈಜುಕೇಂದ್ರ)–3

200 ಮೀ ಮೆಡ್ಲೆ: ಜಸ್ ಸಿಂಗ್ (ಬೆಂಗಳೂರು ಈಜು ಅಕಾಡೆಮಿ; 2ನಿ,42.49ಸೆ)–1, ಚಕ್ಷು ಗೌಡ ಸಿ.ಎಸ್ (ನೆಟ್ಟಕಲ್ಲಪ್ಪ ಅಕ್ವೆಟಿಕ್ ಸೆಂಟರ್)–2, ಅರ್ಜುನ್ ರಾಘವನ್ (ಡಾಲ್ಫಿನ್ ಅಕ್ವೆಟಿಕ್ಸ್)–3.

ಗುಂಪು 2: 200 ಮೀ ಮೆಡ್ಲೆ: ಅಕ್ಷಜ್ ಠಾಕೂರಿಯಾ (ಡಾಲ್ಫಿನ್; 2ನಿ,18.51ಸೆ)–1, ದಕ್ಷ ಮಟ್ಟಾ (ಬಸವನಗುಡಿ)–2, ಹರಿಕಾರ್ತಿಕ್ ವೇಲು (ಗೋಲ್ಡನ್ ಫಿನ್ಸ್ ಸ್ಪೋರ್ಟ್ಸ್‌ ಕ್ಲಬ್)–3.

100 ಮೀ ಫ್ರೀಸ್ಟೈಲ್: ಇಶಾನ್ ಮೆಹ್ರಾ (ಡಾಲ್ಫಿನ್; 54.96ಸೆ)–1, ಪಿ.ವಿ. ಮೊನಿಷ್ (ಬಸವನಗುಡಿ)–2, ಸಾತ್ವಿಕ್ ಸುಜೀರ್ (ಡಾಲ್ಫಿನ್)–3.

ಗುಂಪು 3: 100 ಮೀ ಫ್ರೀಸ್ಟೈಲ್: ಜಸ್ ಸಿಂಗ್ (ಬೆಂಗಳೂರು ಈಜು ಅಕಾಡೆಮಿ; 1ನಿ,04.55ಸೆ)–1, ಎಸ್. ಕ್ರಿಷ್ (ಬಸವನಗುಡಿ)–2, ರೋನಿತ್ ಅರುಣಕುಮಾರ್ (ಡಾಲ್ಫಿನ್)–3. 

50 ಮೀ ಬ್ರೆಸ್ಟ್‌ಸ್ಟ್ರೋಕ್: ಜಸ್‌ ಸಿಂಗ್ (ಬೆಂಗಳೂರು ಅಕಾಡೆಮಿ; 39.22ಸೆ)–1, ಚೇತನ್ ನಾಗರಾಜ ಗಣಪ (ನೆಟ್ಟಕಲ್ಲಪ್ಪ ಅಕ್ವೆಟಿಕ್ ಸೆಂಟರ್)–2, ರಾಮಪ್ರಕಾಶ್ (ಗ್ಲೋಬಲ್ ಈಜುಕೇಂದ್ರ)–3.

ಮಹಿಳೆಯರು:

100 ಮೀ ಫ್ರೀಸ್ಟೈಲ್: ನೀನಾ ವೆಂಕಟೇಶ್ (ಡಾಲ್ಫಿನ್; 59.21ಸೆ)–1, ಲತೀಷಾ ಮಂದಣ್ಣ(ರೇ ಅಕ್ವೆಟಿಕ್ಸ್)–2, ಅಷ್ಮಿತಾ ಚಂದ್ರ (ರೇ ಅಕ್ವೆಟಿಕ್ಸ್)–3. 

50 ಮೀ ಬ್ರೆಸ್ಟ್‌ಸ್ಟ್ರೋಕ್: ವಿಂಧ್ಯಾ ಜಿ ಭಂಡಾರೆ (ಬಸವನಗುಡಿ; 37.61ಸೆ)–1, ಝಾರಾ ಇವಾ ವಿಲಿಯಮ್ಸ್ (ಡಾಲ್ಫಿನ್)–2, ಪ್ರೀತಿ ಪಾಟೀಲ (ಡಾಲ್ಫಿನ್)–3.

200 ಮೀ ಮೆಡ್ಲೆ: ಜೆದಿದಾ ಎ (ಡಿಕೆವಿ ಅಕ್ವೆಟಿಕ್ಸ್; ಕಾಲ: 2ನಿ, 32.71ಸೆ)–1, ನಿಧಿ ಶಶಿಧರ (ಬಸವನಗುಡಿ)–2.

ಬಾಲಕಿಯರು: ಗುಂಪು 1: 200 ಮೀ ಮೆಡ್ಲೆ: ಹಷಿಕಾ ರಾಮಚಂದ್ರ (ಡಾಲ್ಫಿನ್; 2ನಿ,22.57ಸೆ)–1, ಮಾನವಿ ವರ್ಮಾ (ಡಾಲ್ಫಿನ್)–2, ವಿನೀತಾ ನಯನಾ (ಬಸವನಗುಡಿ)–3.

100 ಮೀ ಫ್ರೀಸ್ಟೈಲ್: ಶಾಲಿನಿ ಆರ್ ದೀಕ್ಷಿತ್ (ಡಾಲ್ಫಿನ್; 59.76ಸೆ)–1, ಎಸ್. ರುಜುಲಾ (ಡಾಲ್ಫಿನ್)–2, ರಿಧಿಮಾ ವೀರೇಂದ್ರಕುಮಾರ್ (ಬಸವನಗುಡಿ)–3.

ಗುಂಪು 2: 800 ಮೀ ಫ್ರೀಸ್ಟೈಲ್: ಮೀನಾಕ್ಷಿ ಮೆನನ್ (ಬಸವನಗುಡಿ; 9ನಿ,41.77ಸೆ)–1, ಶ್ರೀಚರಣಿ ತುಮು (ಗ್ಲೋಬಲ್ ಈಜುಕೇಂದ್ರ)–2, ಸುಹಾಸಿನಿ ಘೋಷ್ (ಡಾಲ್ಫಿನ್)–3.

200ಮೀ ಮೆಡ್ಲೆ: ತನಿಷಿ ಗುಪ್ತಾ (ಡಾಲ್ಫಿನ್ ; 2ನಿ, 25.85ಸೆ)–1, ನೈಷಾ (ಬಸವನಗುಡಿ)–2, ಎಸ್. ತಾನ್ಯಾ (ಡಾಲ್ಫಿನ್)–3.

ಗುಂಪು 3: 100 ಮೀ ಫ್ರೀಸ್ಟೈಲ್: ಧ್ರುತಿ ಕರಿಬಸವೇಶ್ವರ (ಬೆಂಗಳೂರು ಈಜು ಅಕಾಡೆಮಿ; 1ನಿ,10.32ಸೆ)–1, ಆವುನಾ ಆಳ್ವಾ ಪಿ (ಗೋಲ್ಡನ್ ಫಿನ್ಸ್ ಸ್ಪೋರ್ಟ್ಸ್ ಕ್ಲಬ್)–2, ದಿಶಾ ಹೊಂಡಿ (ಅಬ್ಬಾ ಸ್ಪೋರ್ಟ್ಸ್ ಕ್ಲಬ್)–3.

100 ಮೀ ಫ್ರೀಸ್ಟೈಲ್: ಧಿನಿಧಿ ದೇಸಿಂಗು (ಡಾಲ್ಫಿನ್; 58.08ಸೆ)–1, ಶ್ರೀಚರಣಿ ತುಮು (ಗ್ಲೋಬಲ್)–2, ಸುಹಾಸಿನಿ ಘೋಷ್ (ಡಾಲ್ಫಿನ್)–3.

50 ಮೀ ಬ್ರೆಸ್ಟ್‌ಸ್ಟ್ರೋಕ್: ವಿಭಾ ರೆಡ್ಡಿ ಮರಮ್ (ಡಾಲ್ಫಿನ್; 41.20ಸೆ)–1, ಹನ್ಸಿಕಾ ರೆಡ್ಡಿ (ನೆಟ್ಟಕಲ್ಲಪ್ಪ ಅಕ್ವೆಟಿಕ್ ಸೆಂಟರ್)–2, ಅನಿಕಾ ಹಲಗೇಕರ್ (ಸ್ವಿಮ್ಮರ್ಸ್ ಕ್ಲಬ್, ಬೆಳಗಾವಿ)–3.

200 ಮೀ ಮೆಡ್ಲೆ: ಜನನಿ ವೆಂಕಟೇಶ್ವರ್ ಪೆರುಮಾಳ್ (ಡಾಲ್ಫಿನ್; 2ನಿ,51.05ಸೆ)–1, ವಿ. ಸುಮನ್ವಿ (ಡಿಕೆವಿ ಈಜುಕೇಂದ್ರ)–2, ಧ್ರುತಿ ಕರಿಬಸವೇಶ್ವರ (ಬೆಂಗಳೂರು ಈಜುಕೇಂದ್ರ)–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT