ನವದೆಹಲಿ (ಪಿಟಿಐ): ಒಡಿಶಾ ಓಪನ್ ಚೆಸ್ ಟೂರ್ನಿ ಗೆದ್ದುಕೊಂಡಿರುವುದಕ್ಕೆ ಗ್ರ್ಯಾಂಡ್ಮಾಸ್ಟರ್ ಅಭಿಜಿತ್ ಗುಪ್ತಾ ಅವರಿಗೆ ಸಲ್ಲಬೇಕಾಗಿ ರುವ ಬಹುಮಾನ ಹಣವನ್ನು ಪಾವತಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅಖಿಲ ಭಾರತ ಚೆಸ್ ಫೆಡರೇಷನ್ ಶನಿವಾರ ಭರವಸೆ ನೀಡಿದೆ.

ಜನವರಿಯಲ್ಲಿ ನಡೆದಿದ್ದ ಈ ಟೂರ್ನಿಯಲ್ಲಿ ಪ್ರಶಸ್ತಿ ಬಹುಮಾನವಾದ ₹5.5 ಲಕ್ಷ ಬಹುಮಾನ ಮೊತ್ತವನ್ನು ಆಯೋಜಕ ಒಡಿಶಾ ಚೆಸ್ ಸಂಸ್ಥೆ ಬಾಕಿ ಉಳಿಸಿಕೊಂಡಿದೆ. ಅದನ್ನು ಕೊಡಿಸಲು ನೆರವಾಗುವಂತೆ ಗುಪ್ತಾ ಅವರು ಕೇಂದ್ರ ಕ್ರೀಡಾ ಸಚಿವಾಲಯದ ನೆರವು ಕೋರಿದ್ದರು.

‘ಅಖಿಲ ಭಾರತ ಚೆಸ್ ಫೆಡರೇಷನ್ಗೆ ನಾಲ್ಕು ತಿಂಗಳಿಂದ ಪದೇ ಪದೇ ಪತ್ರ ಬರೆದಿದ್ದೇನೆ. ಇದುವರೆಗೂ ಬಹುಮಾನ ಮೊತ್ತ ಬಂದಿಲ್ಲ. ಈ ಬಗ್ಗೆ ಗಮನಹರಿಸಿ ಆಟಗಾರರಿಗೆ ಬರಬೇಕಾದ ಹಣಕೊಡಿಸುವುವಂತೆ’ 36 ವರ್ಷ ವಯಸ್ಸಿನ ಆಟಗಾರ ‘ಎಕ್ಸ್’ ಮೂಲಕ ಸಚಿವಾಲಯಕ್ಕೆ ಮನವಿ ಮಾಡಿದ್ದರು.

‘ಸಮಸ್ಯೆ ಬಗೆಹರಿಸಲಾಗುವುದು ಎಂದು ಎಐಸಿಎಫ್ ಅಧ್ಯಕ್ಷ ನಿತಿನ್ ನಾರಂಗ್ ಅವರು ತಮಗೆ ಭರವಸೆ ನೀಡಿದ್ದಾರೆ’ ಎಂದು ಅಭಿಜಿತ್ ನಂತರ ಇನ್ನೊಂದು ಪೋಸ್ಟ್ ಹಾಕಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-51-1138858327

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.