ಭುವನೇಶ್ವರ: ಭಾರತವು 2028ರ ವಿಶ್ವ ಅಥ್ಲೆಟಿಕ್ಸ್ ಒಳಾಂಗಣ ಚಾಂಪಿಯನ್ಷಿಪ್ಗೆ ಆತಿಥ್ಯ ವಹಿಸಲಿದೆ. ಒಡಿಶಾದ ಭುವನೇಶ್ವರದಲ್ಲಿ ಈ ಪ್ರತಿಷ್ಠಿತ ಕೂಟ ನಡೆಯಲಿದೆ ಎಂದು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ತಿಳಿಸಿದ್ದಾರೆ.

‘2028ರ ವಿಶ್ವ ಅಥ್ಲೆಟಿಕ್ಸ್ ಒಳಾಂಗಣ ಚಾಂಪಿಯನ್ಷಿಪ್ ಅನ್ನು ಒಡಿಶಾ ಆಯೋಜಿಸುತ್ತಿದೆ ಎಂದು ಹೇಳಲು ಹೆಮ್ಮೆಯಾಗುತ್ತದೆ. ಈ ಕೂಟದ ಮೂಲಕ ಒಡಿಶಾ ರಾಜ್ಯವು ಕ್ರೀಡೆಗಳ ಮೇಲೆ ಹೊಂದಿರುವ ಪ್ರೀತಿಯನ್ನು ಜಗತ್ತು ವೀಕ್ಷಿಸಲಿದೆ’ ಎಂದು ಮಾಝಿ ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.

‘ವಿಶ್ವದಾದ್ಯಂತ ಇರುವ ಕ್ರೀಡಾಪಟುಗಳು ಮತ್ತು ಅಭಿಮಾನಿಗಳನ್ನು ಸ್ವಾಗತಿಸಲು ಹಾಗೂ ಆತಿಥ್ಯ ಒದಗಿಸಲು ಒಡಿಶಾ ರಾಜ್ಯವು ಎದುರು ನೋಡುತ್ತಿದೆ’ ಎಂದ ಅವರು, ದೇಶದಲ್ಲಿ ಕ್ರೀಡಾ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ನಿರಂತರ ಮಾರ್ಗದರ್ಶನ ಮತ್ತು ಬೆಂಬಲ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಭಾರತದಲ್ಲಿ ಮೊದಲ ಬಾರಿ ನಡೆಯುತ್ತಿರುವ ಚಾಂಪಿಯನ್ಷಿಪ್ನ ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಗಳು 2028ರ ಮಾರ್ಚ್ 3 ರಿಂದ 5ರವರೆಗೆ ಆಯೋಜಿಸಲಿದೆ. ಸಾಮಾನ್ಯವಾಗಿ ಮೂರು ದಿನಗಳಲ್ಲಿ ಪುರುಷರು ಮತ್ತು ಮಹಿಳೆಯರಿಗೆ ತಲಾ 13ರಂತೆ ಒಟ್ಟು 26 ಸ್ಪರ್ಧೆಗಳನ್ನು ಒಳಗೊಂಡಿರುತ್ತವೆ.

60 ಮೀ, 400 ಮೀ, 800 ಮೀ, 1500 ಮೀ, 3000 ಮೀ ಓಟ, 60 ಮೀ ಹರ್ಡಲ್ಸ್, 4x400 ಮೀ ರಿಲೆ, ಹೈಜಂಪ್, ಪೋಲ್ ವಾಲ್ಟ್, ಲಾಂಗ್ ಜಂಪ್, ಟ್ರಿಪಲ್ ಜಂಪ್, ಶಾಟ್ಪಟ್, ಹೆಪ್ಟಾಥ್ಲಾನ್ (ಮಹಿಳೆಯರಿಗೆ ಪೆಂಟಾಥ್ಲಾನ್) ಇವು ಕೂಟದಲ್ಲಿರುವ 13 ಸ್ಪರ್ಧೆಗಳು. ಈ ವರ್ಷ ಪೋಲೆಂಡ್ ಆವೃತ್ತಿಯಲ್ಲಿ 4x400 ಮೀ. ಮಿಶ್ರ ರಿಲೆ ಸ್ಪರ್ಧೆಯನ್ನು ಪರಿಚಯಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.