ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತವರಿಗೆ ಬಂದ ಸ್ವಪ್ನಿಲ್‌ಗೆ ಅದ್ಧೂರಿ ಸ್ವಾಗತ

Published : 8 ಆಗಸ್ಟ್ 2024, 14:59 IST
Last Updated : 8 ಆಗಸ್ಟ್ 2024, 14:59 IST
ಫಾಲೋ ಮಾಡಿ
Comments

ಪುಣೆ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದು ಗುರುವಾರ ತವರಿಗೆ ಮರಳಿದ ಸ್ವಪ್ನಿಲ್‌ ಕುಸಾಳೆ ಅವರಿಗೆ ಅದ್ಧೂರಿ ಸ್ವಾಗತ ನೀಡಲಾಯಿತು.

ಕೊಲ್ಹಾಪುರದ ಸ್ವಪ್ನಿಲ್‌ ಅವರು 50 ಮೀ ರೈಫಲ್ ತ್ರೀ ಪೊಸಿಷನ್‌ ವಿಭಾಗದಲ್ಲಿ ಭಾರತಕ್ಕೆ ಮೂರನೇ ಪದಕ ತಂದುಕೊಟ್ಟಿದ್ದಾರೆ. ಪುಣೆಯ ವಿಮಾನ ನಿಲ್ದಾಣ ನಿಲ್ದಾಣದಲ್ಲಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.

ಬಳಿಕ ಸ್ವಪ್ನಿಲ್‌, ದಗ್ದುಶೇತ್ ಹಲ್ವಾಯಿ ಗಣಪತಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಕುಟುಂಬದ ಸದಸ್ಯರು, ಕೋಚ್‌ ಜೊತೆಗಿದ್ದರು.

‘ಈ ಪದಕ ನನ್ನದಲ್ಲ, ಅದು ದೇಶಕ್ಕೆ ಮತ್ತು ಮಹಾರಾಷ್ಟ್ರಕ್ಕೆ ಸೇರಿದ್ದು. ನನ್ನ ಸಾಧನೆಯ ಹಾದಿಯಲ್ಲಿ ಪ್ರೋತ್ಸಾಹ ನೀಡಿದ ಸರ್ಕಾರಗಳು, ರಾಷ್ಟ್ರೀಯ ಒಕ್ಕೂಟ ಮತ್ತು ಎಲ್ಲರಿಗೂ ಚಿರಋಣಿ. ಮಹಾರಾಷ್ಟ್ರಕ್ಕೆ ಕೀರ್ತಿ ತರಲು ಸಾಧ್ಯವಾಗಿದ್ದು ನನ್ನ ಅದೃಷ್ಟ’ ಎಂದು ಬಾಳೆವಾಡಿ ಕ್ರೀಡಾ ಸಂಕೀರ್ಣದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಅವರು ಮಾಧ್ಯಮಗಳಿಗೆ ತಿಳಿಸಿದರು.

‘ಈ ಸಾಧನೆಯ ಯಶಸ್ಸು ನನ್ನ ಕುಟುಂಬಕ್ಕೆ ಮತ್ತು ಕೋಚ್‌ಗೆ ಸಲ್ಲಬೇಕು. ಅವರ ಪರಿಶ್ರಮ ಮತ್ತು ತ್ಯಾಗದಿಂದಾಗಿ ಇಂದು ನನ್ನ ಕನಸು ನನಸಾಗಿದೆ. ಮುಂದಿನ ಬಾರಿ ಚಿನ್ನದ ಪದಕದ ಗುರಿ ಹೊಂದಿದ್ದೇನೆ’ ಎಂದು 29 ವರ್ಷ ವಯಸ್ಸಿನ ಸ್ವಪ್ನಿಲ್‌ ಹೇಳಿದರು.

ಒಲಿಂಪಿಕ್ಸ್‌ನ 50 ಮೀ ರೈಫಲ್ ತ್ರೀ ಪೊಸಿಷನ್‌ ವಿಭಾಗದಲ್ಲಿ ಫೈನಲ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದ ಸ್ವಪ್ನಿಲ್‌, ಸ್ಪರ್ಧೆಯ ಹಾದಿಯಲ್ಲಿ ಒತ್ತಡವನ್ನು ನಿಭಾಯಿಸಲು ಕಲಿತಿದ್ದೇನೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT