ಆರ್ಲೀನ್ಸ್ (ಫ್ರಾನ್ಸ್): ಭಾರತದ ಉದಯೋನ್ಮುಖ ತಾರೆಯರಾದ ತನ್ವಿ ಶರ್ಮಾ ಹಾಗೂ ಇಶಾರಾಣಿ ಬರೂವಾ ಅವರು ಆರ್ಲೀನ್ಸ್ ಮಾಸ್ಟರ್ಸ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶನಿವಾರ ಸೆಮಿಫೈನಲ್ನಲ್ಲಿ ಪರಾಭವಗೊಂಡರು.

ವಿಶ್ವ ಜೂನಿಯರ್ ಚಾಂಪಿಯನ್ಷಿಪ್ ಬೆಳ್ಳಿ ಪದಕ ವಿಜೇತೆ ತನ್ವಿ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ 9–21, 16–21ರಿಂದ ಮಾಜಿ ವಿಶ್ವ ಚಾಂಪಿಯನ್ ನೊಜೊಮಿ ಒಕುಹರಾ (ಜಪಾನ್) ಅವರಿಗೆ ಶರಣಾದರು.

2016ರ ಒಲಿಂಪಿಕ್ ಕಂಚು ವಿಜೇತೆ, 31 ವರ್ಷದ ನೊಜೊಮಿ ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿ 3–0 ಮುನ್ನಡೆ ಸಾಧಿಸಿದರು. ತನ್ವಿ ಎಸಗುತ್ತಿದ್ದ ತಪ್ಪಿನ ಲಾಭ ಪಡೆದ ಜಪಾನ್ ಆಟಗಾರ್ತಿ ಮುನ್ನಡೆಯನ್ನು ಹಿಗ್ಗಿಸುತ್ತಾ ಸಾಗಿ, 12 ಅಂಕಗಳಿಂದ ಮೊದಲ ಗೇಮ್ ಅನ್ನು ತಮ್ಮದಾಗಿಸಿಕೊಂಡರು.

ಎರಡನೇ ಗೇಮ್ನಲ್ಲಿ ಭಾರತದ ಆಟಗಾರ್ತಿ ಕೊಂಚ ಪ್ರತಿರೋಧ ತೋರಿದರು. ಒಂದು ಹಂತದಲ್ಲಿ ಪಂದ್ಯವು 12–12ರಿಂದ ಸಮಬಲದ ಹೋರಾಟ ಕಂಡುಬಂತು. ಆದರೆ, ಅದೇ ಲಯವನ್ನು ಕಾಯ್ದುಕೊಳ್ಳಲು ತನ್ವಿ ವಿಫಲವಾದರು.

ಮತ್ತೊಂದು ಸೆಮಿಫೈನಲ್ನಲ್ಲಿ ಬರುವಾ ಅವರು 12–21, 21–23ರಿಂದ ಥಾಯ್ಲೆಂಡ್ನ ಪಿಚಮನ್ ಒಪತ್ನಿಪತ್ ವಿರುದ್ಧ ಸೋತರು. ಮೊದಲ ಗೇಮ್ ಅನ್ನು ಸುಲಭವಾಗಿ ಗೆದ್ದುಕೊಂಡ ಪಿಚಮನ್ ಅವರು ಎರಡನೇ ಗೇಮ್ ಗೆಲ್ಲಲು ಬೆವರು ಹರಿಸಬೇಕಾಯಿತು. ಪಂದ್ಯ 52 ನಿಮಿಷಗಳವರೆಗೆ ಸಾಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.