ಓರ್ಲಿಯನ್ಸ್ (ಫ್ರಾನ್ಸ್): ಭಾರತದ ಯುವ ತಾರೆಗಳಾದ ಆಯುಷ್ ಶೆಟ್ಟಿ ಮತ್ತು ತನ್ವಿ ಶರ್ಮಾ ಅವರು ಮಂಗಳವಾರ ಇಲ್ಲಿ ಆರಂಭವಾಗುವ ಓರ್ಲಿಯನ್ಸ್ ಮಾಸ್ಟರ್ಸ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ. ಅನುಭವಿ ಆಟಗಾರ ಎಚ್.ಎಸ್. ಪ್ರಣಯ್ ಭುಜದ ಗಾಯದಿಂದಾಗಿ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

33 ವರ್ಷದ ಪ್ರಣಯ್ ಅವರು ಪುರುಷರ ಸಿಂಗಲ್ಸ್ ಆರಂಭಿಕ ಸುತ್ತಿನಲ್ಲಿ ಅಗ್ರ ಶ್ರೇಯಾಂಕದ ಚೌ ಟಿಯೆನ್ ಚೆನ್ (ತೈವಾನ್) ಅವರನ್ನು ಎದುರಿಸಬೇಕಿತ್ತು. ಕಳೆದ ವಾರ ನಡೆದ ಸ್ವಿಸ್ ಓಪನ್ ಟೂರ್ನಿಯ ವೇಳೆಯೇ ಅವರು ನೋವಿನಿಂದ ಬಳಲುತ್ತಿದ್ದರು. ಬಾಸೆಲ್ನಲ್ಲಿ ಜಪಾನ್ನ ಕೋಕಿ ವಟನಾಬೆ ವಿರುದ್ಧದ ಪಂದ್ಯದಿಂದ ಅವರು ಹಿಂದೆ ಸರಿದಿದ್ದರು.

‘ಸ್ವಿಸ್ ಓಪನ್ಗೆ ಪ್ರಯಾಣಿಸಿದ ನಂತರ ಭುಜದ ನೋವು ಹೆಚ್ಚಾಯಿತು. ನಮಗೆ ಕಾರಣ ತಿಳಿದಿರಲಿಲ್ಲ. ಆದ್ದರಿಂದ ಸ್ಪರ್ಧೆಯಿಂದ ಹಿಂದೆ ಸರಿಯಲು ನಿರ್ಧರಿಸಿದೆ. ಸ್ಕ್ಯಾನಿಂಗ್ಗೆ ವೇಳೆ ಸಣ್ಣ ಸಮಸ್ಯೆ ಇರುವುದು ಗೊತ್ತಾಗಿದೆ. ಶೀಘ್ರದಲ್ಲೇ ಚೇತರಿಸಿಕೊಳ್ಳುವೆ’ ಎಂದು ಪ್ರಣಯ್ ಪ್ರತಿಕ್ರಿಯಿಸಿದ್ದಾರೆ. ಏ.7 ರಿಂದ 12ರವರೆಗೆ ಚೀನಾದ ನಿಂಗ್ಬೊದಲ್ಲಿ ನಡೆಯಲಿರುವ ಏಷ್ಯನ್ ಚಾಂಪಿಯನ್ಷಿಪ್ಗೆ ಮರಳುವ ಗುರಿ ಹೊಂದಿದ್ದಾರೆ.

₹2.30 ಕೋಟಿ ಬಹುಮಾನ ಮೊತ್ತ ಒಳಗೊಂಡಿರುವ ಟೂರ್ನಿಯಲ್ಲಿ ವಿಶ್ವದ 25ನೇ ಶ್ರೇಯಾಂಕದ ಆಯುಷ್ ಅವರು ತೈವಾನ್ನ ಲೀ ಚಿಯಾ ಹಾವೊ ವಿರುದ್ಧ ಅಭಿಯಾನ ಆರಂಭಿಸುವರು. 30ನೇ ಕ್ರಮಾಂಕದ ಕಿದಂಬಿ ಶ್ರೀಕಾಂತ್ ಅವರು ಆರಂಭಿಕ ಸುತ್ತಿನಲ್ಲಿ ಡೆನ್ಮಾರ್ಕ್ನ ಮ್ಯಾಗ್ನಸ್ ಜೋಹಾನ್ಸೆನ್ ಅವರನ್ನು ಎದುರಿಸಲಿದ್ದಾರೆ.

ಸ್ವಿಸ್ ಓಪನ್ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದ ತರುಣ್ ಮನ್ನೆಪಲ್ಲಿ ಅವರು ತೈವಾನ್ ವಾಂಗ್ ಟ್ಸು ವೈ ವಿರುದ್ಧ ಕಣಕ್ಕಳಿಯಲಿದ್ದಾರೆ. 42ನೇ ಶ್ರೇಯಾಂಕದ ಕಿರಣ್ ಜಾರ್ಜ್ ಅವರು ಮೂರನೇ ಶ್ರೇಯಾಂಕದ ಜಪಾನ್ನ ಕೆಂಟಾ ನಿಶಿಮೊಟೊ ಅವರನ್ನು ಎದುರಿಸಲಿದ್ದಾರೆ.

ಮಹಿಳೆಯರ ಸಿಂಗಲ್ಸ್ನಲ್ಲಿ ತನ್ವಿ ಅವರು ಥಾಯ್ಲೆಂಡ್ನ ಸುಪಾನಿಡಾ ಕಟೆಥಾಂಗ್ ಎದುರು ಅಭಿಯಾನ ಪ್ರಾರಂಭಿಸುವರು. ಮಾಳವಿಕಾ ಬನ್ಸೋಡ್ ಅವರು ತೈವಾನ್ನ ಸುಂಗ್ ಶುವೋ ಯುನ್ ಅವರನ್ನು ಎದುರಿಸುವರು. ಎಡ ಮೊಣಕಾಲಿನ ಗಾಯದಿಂದ ಚೇತರಿಸಿಕೊಂಡಿರುವ ಬನ್ಸೋಡ್ ಹಲವು ತಿಂಗಳ ಬಳಿಕ ಸ್ಪರ್ಧಾ ಕಣಕ್ಕೆ ಮರಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.