ಹಾರ್ಸೆನ್ಸ್ (ಡೆನ್ಮಾರ್ಕ್), (ಪಿಟಿಐ): ಸಕ್ರಿಯ ಆಟಗಾರ್ತಿ ಯಾಗಿರುವ ಪಿ.ವಿ.ಸಿಂಧು ಅವರು ಈಗ ಮತ್ತೊಂದು ಪಾತ್ರವನ್ನೂ ವಹಿಸುತ್ತಿದ್ದಾರೆ. ಈಗ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ನ (ಬಿಡಬ್ಲ್ಯುಎಫ್) ಆಡಳಿತ ಸಮಿತಿ ಸದಸ್ಯೆಯೂ ಆಗಿರುವ ಅವರು ‘ವಿಶ್ವದಾದ್ಯಂತ ಶಟ್ಲರ್ಗಳ ಧ್ವನಿಗೆ ಪ್ರತಿನಿಧಿಯಾಗುವುದಾಗಿ’ ಭರವಸೆ ನೀಡಿದ್ದಾರೆ.

ಒಲಿಂಪಿಕ್ಸ್ನಲ್ಲಿ ಎರಡು ಬಾರಿ ಪದಕ ಗೆದ್ದಿರುವ ಸಿಂಧು ಅವರು ಬಿಡಬ್ಲ್ಯುಎಫ್ ಕೌನ್ಸಿಲ್ನಲ್ಲಿ ಮತದಾನದ ಹಕ್ಕನ್ನೂ ಹೊಂದಿದ್ದಾರೆ. ಅವರು 2025ರ ಡಿಸೆಂಬರ್ನಲ್ಲಿ ಬಿಡಬ್ಲ್ಯುಎಫ್ ಅಥ್ಲೀಟ್ಸ್ ಕಮಿಷನ್ನ ಮುಖ್ಯಸ್ಥೆ ಆಗಿ ಆಯ್ಕೆಯಾಗಿದ್ದರು.

ಶನಿವಾರ (ಏಪ್ರಿಲ್ 25) ಅವರು ಬಿಡಬ್ಲ್ಯುಎಫ್ನ ವಾರ್ಷಿಕ ಸಭೆಯಲ್ಲಿ ಮೊದಲ ಬಾರಿ ಭಾಗವಹಿಸುವ ಮೂಲಕ ತಮ್ಮ ಅಧಿಕಾರಾವಧಿಯನ್ನು ಔಪಚಾರಿಕವಾಗಿ ಆರಂಭಿಸಿದರು. ಆಟಗಾರ್ತಿಯೊಬ್ಬರು ಸಕ್ರಿಯವಾಗಿರು ವಾಗಲೇ ಆಡಳಿತದಲ್ಲಿ ಭಾಗಿಯಾಗಿರುವ ವಿರಳ ಅವಕಾಶ ಸಿಂಧು ಅವರಿಗೆ ಒಲಿದಿದೆ. ಅವರು ಆಡಳಿತ ಮಂಡಳಿಯಲ್ಲಿ ಆಟಗಾರರ ಅಹವಾಲುಗಳಿಗೆ ಧ್ವನಿಯಾಗುವ ಜೊತೆಗೆ ಮತಾಧಿಕಾರದ ಹಕ್ಕನ್ನೂ ಹೊಂದಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-43-839048482

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.