ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಕಿ: ಕಂಚು ಗೆದ್ದ ಪಾಕ್‌ ಆಟಗಾರರಿಗೆ ಬಹುಮಾನ

Published : 18 ಸೆಪ್ಟೆಂಬರ್ 2024, 14:17 IST
Last Updated : 18 ಸೆಪ್ಟೆಂಬರ್ 2024, 14:17 IST
ಫಾಲೋ ಮಾಡಿ
Comments

ಲಾಹೋರ್‌: ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯಲ್ಲಿ ಕಂಚಿನ ಪದಕವನ್ನ ಗೆದ್ದ ಪಾಕಿಸ್ತಾನ ತಂಡದ ಆಟಗಾರರಿಗೆ ತಲಾ 100 ಅಮೆರಿಕನ್‌ ಡಾಲರ್‌ (28 ಸಾವಿರ ಪಾಕಿಸ್ತಾನದ ರೂಪಾಯಿ) ಬಹುಮಾನವನ್ನು ಪಾಕಿಸ್ತಾನ ಹಾಕಿ ಫೆಡರೇಷನ್ ಘೋಷಿಸಿದೆ.

ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡವು 5–2 ಗೋಲುಗಳಿಂದ ದಕ್ಷಿಣ ಕೊರಿಯಾ ತಂಡವನ್ನು ಮಣಿಸಿತ್ತು. ಇದು ಮೊದಲು ಸೆಮಿಫೈನಲ್‌ನಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಚೀನಾ ವಿರುದ್ಧ ನಿರಾಸೆ ಅನುಭವಿಸಿತ್ತು.

ತಂಡದ ಪ್ರದರ್ಶನವನ್ನು ಪ್ರೋತ್ಸಾಹಿಸಲು ಆಟಗಾರರಿಗೆ ಮತ್ತು ನೆರವು ಸಿಬ್ಬಂದಿಗೆ ಈ ನಗದು ಪ್ರಶಸ್ತಿ ಬಹುಮಾನ ಘೋಷಿಸಲಾಗಿದೆ. ಅಲ್ಲದೆ, ಟೂರ್ನಿಯ ವೇಳೆ ಗಾಯಗೊಂಡ ಅಬೂಬಕ್ಕರ್ ಮೊಹಮದ್ ಅವರಿಗೆ ಪುನರ್ವಸತಿ ಸೌಲಭ್ಯ ನೀಡಲಾಗುವುದು ಎಂದು ಫೆಡರೇಷನ್‌ ಪ್ರಕಟಣೆ ತಿಳಿಸಿದೆ.

ಟೂರ್ನಿಯ ವೇಳೆ ತಂದೆ ನಿಧನರಾದರೂ ಆಟ ಮುಂದುವರಿಸಿದ ಗಜನ್ ಫರ್ ಅಲಿ ಅವರಿಗೆ ಕಂಚಿನ ಪದಕವನ್ನು ಅರ್ಪಿಸಲಾಗುವುದು ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT