ನವದೆಹಲಿ (ಪಿಟಿಐ): ಪಾಕಿಸ್ತಾನ ಜೊತೆಗೆ ದ್ವಿಪಕ್ಷೀಯ ಸರಣಿಗಳಲ್ಲಿ ಆಡುವುದಕ್ಕೆ ಹೋದ ವರ್ಷ ಹೇರಲಾಗಿದ್ದ ನಿಷೇಧ ಮುಂದುವರಿಯಲಿದೆ. ಆದರೆ ಅಂತರರಾಷ್ಟ್ರೀಯ ಕ್ರೀಡಾಕೂಟಗಳಿಗೆ ಆ ದೇಶದ ಅಥ್ಲೀಟುಗಳು ಇಲ್ಲಿ ಬಂದು ಪಾಲ್ಗೊಳ್ಳುವುದಕ್ಕೆ ತಡೆಯಿರುವುದಿಲ್ಲ ಎಂದು ಕ್ರೀಡಾ ಸಚಿವಾಲಯ ಬುಧವಾರ ತಿಳಿಸಿದೆ.

ಕ್ರೀಡಾಪಟುಗಳು, ತಂಡದ ಅಧಿಕಾರಿಗಳು, ತಾಂತ್ರಿಕ ಅಧಿಕಾರಿಗಳು, ಅಂತರರಾಷ್ಟ್ರೀಯ ಕ್ರೀಡಾ ಫೆಡರೇಷನ್ಗಳ ಪದಾಧಿಕಾರಿಗಳಿಗೆ ವೀಸಾ ಪ್ರಕ್ರಿಯೆಯನ್ನು ಸರಳೀಕರಣಗೊ ಳಿಸುವುದಕ್ಕೆ ಬದ್ಧರಾಗಿರುವುದಾಗಿ ಸಚಿವಾಲಯ ತಿಳಿಸಿದೆ.

‘ದ್ವಿಪಕ್ಷೀಯ ಸರಣಿಗಳಿಗೆ ಸಂಬಂಧಿಸಿದಂತೆ ಭಾರತ ತಂಡಗಳು, ಪಾಕಿಸ್ತಾನದಲ್ಲಿ ನಡೆಯುವ ಸರಣಿಗಳಿಗೆ ಹೋಗುವುದಿಲ್ಲ. ಅಥವಾ ಪಾಕಿಸ್ತಾನದ ತಂಡಗಳಿಗೆ ಇಲ್ಲಿ ಬಂದು ಆಡಲು ಅನುಮತಿ ನೀಡುವುದಿಲ್ಲ’ ಎಂದು ಸಚಿವಾಲಯವು ರಾಷ್ಟ್ರೀಯ ಕ್ರೀಡಾ ಫೆಡರೇಷನ್ಗಳಿಗೆ, ಭಾರತ ಒಲಿಂಪಿಕ್ ಸಂಸ್ಥೆಗೆ (ಐಒಎ) ಮತ್ತು ಭಾರತ ಕ್ರೀಡಾ ಪ್ರಾಧಿಕಾರಕ್ಕೆ ಕಳುಹಿಸಿರುವ ಸುತ್ತೋಲೆಯಲ್ಲಿ ತಿಳಿಸಿದೆ.

‘ಅಂತರರಾಷ್ಟ್ರೀಯ ಅಥವಾ ಬಹು ತಂಡಗಳು ಭಾಗವಹಿಸುವ ಕ್ರೀಡಾಕೂಟಗಳು ಭಾರತದಲ್ಲಿ ಅಥವಾ ಹೊರದೇಶದಲ್ಲಿ ನಡೆಯುವ ಸಂದರ್ಭದಲ್ಲಿ ಅಂತರ ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳ ಮಾರ್ಗದರ್ಶಿ ಸೂತ್ರ ಮತ್ತು ನಮ್ಮ ಕ್ರೀಡಾಪಟುಗಳ ಹಿತಾಸಕ್ತಿ ಗಮನದಲ್ಲಿಟ್ಟುಕೊಳ್ಳಲಾಗುವುದು’ ಎಂದೂ ತಿಳಿಸಲಾಗಿದೆ.

‘ಅಂತರರಾಷ್ಟ್ರೀಯ ಕೂಟಗಳಲ್ಲಿ ಪಾಕಿಸ್ತಾನ ತಂಡ ಅಥವಾ ಆ ದೇಶದ ಆಟಗಾರರಿದ್ದಲ್ಲಿ ಭಾರತದ ಆಟಗಾರರಿಗೆ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದು. ಹಾಗೆಯೇ ಭಾರತದಲ್ಲಿ ಇಂಥ ಅಂತರರಾಷ್ಟ್ರೀಯ ಕ್ರೀಡಾಕೂಟಗಳು ನಡೆದರೆ ಪಾಕಿಸ್ತಾನದ ಆಟಗಾರರು ಅಥವಾ ತಂಡಗಳಿಗೆ ಪಾಲ್ಗೊಳ್ಳಲು ಅವಕಾಶವಿದೆ’ ಎಂದು ಸುತ್ತೋಲೆ ಹೇಳಿದೆ.

2025ರಲ್ಲಿ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದನಾ ದಾಳಿ ನಂತರ ಯುಎಇಯಲ್ಲಿ ಹಮ್ಮಿ ಕೊಂಡಿದ್ದ ಏಷ್ಯಾಕಪ್ ಕ್ರಿಕೆಟ್ನಲ್ಲಿ ನಲ್ಲಿ ಭಾರತ ಭಾಗವಹಿಸುವುದಕ್ಕೆ ಆಕ್ರೋಶಗಳು ವ್ಯಕ್ತವಾಗಿದ್ದವು. ಆ ಟೂರ್ನಿಯಲ್ಲಿ ಪಾಕಿ ಸ್ತಾನವೂ ಪಾಲ್ಗೊಂಡಿತ್ತು. ನಂತರ ಕ್ರೀಡಾ ಸಚಿವಾಲಯವು ಇದಕ್ಕೆ ಸಂಬಂಧಿಸಿ ನೀತಿಯನ್ನು ರೂಪಿಸಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-51-1016726027

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.