ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡ್ವಾಣಿ– ಮೆಹ್ತಾ ಜೋಡಿಗೆ ವಿಶ್ವ ಟೀಂ ಸ್ನೂಕರ್‌ ಪ್ರಶಸ್ತಿ

ಕರ್ನಾಟಕ ಆಟಗಾರನಿಗೆ 23ನೇ ವಿಶ್ವ ಪ್ರಶಸ್ತಿ
Last Updated 25 ಸೆಪ್ಟೆಂಬರ್ 2019, 16:47 IST
ಅಕ್ಷರ ಗಾತ್ರ

ಮಂದಾಲಯ್‌, ಮ್ಯಾನ್ಮಾರ್‌ : ಭಾರತದ ಪಂಕಜ್‌ ಅಡ್ವಾಣಿ ಮತ್ತು ಆದಿತ್ಯ ಮೆಹ್ತಾ ಜೋಡಿ ಪ್ರಬಲ ಥಾಯ್ಲೆಂಡ್‌ ಎದುರಾಳಿಗಳ ವಿರುದ್ಧ ಜಯಗಳಿಸಿ ಬುಧವಾರ ಐಬಿಎಸ್‌ಎಫ್‌ ವಿಶ್ವ ಸ್ನೂಕರ್‌ ಟೀಮ್‌ ಸ್ಪರ್ಧೆಯನ್ನು ಗೆದ್ದುಕೊಂಡಿತು.

ಈ ಯಶಸ್ಸಿನ ಮೂಲಕ ಅಡ್ವಾಣಿ ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಗೆದ್ದ ಪ್ರಶಸ್ತಿಗಳ ಸಂಖ್ಯೆ 23ಕ್ಕೆ ಏರಿದೆ. ಇನ್ನೊಂದೆಡೆ ಆದಿತ್ಯ ಅವರಿಗೆ ಇದು ಮೊದಲ ಪ್ರಶಸ್ತಿ. ಈ ಜೋಡಿ 5–2 ರಿಂದ (65–31, 9–69, 74–8, 21–64, 55–44, 72–23, 83–9 ರಲ್ಲಿ ಜಯಗಳಿಸಿತು.

ಕಳೆದ ವಾರ ಅಡ್ವಾಣಿ ಬಿಲಿಯರ್ಡ್ಸ್‌ನಲ್ಲೂ ಪ್ರಶಸ್ತಿ ಗೆದ್ದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT