ಘಾಜಿಯಾಬಾದ್: ರಾಷ್ಟ್ರೀಯ ಮಟ್ಟದ ಪ್ಯಾರಾ ಅಥ್ಲೀಟ್ ಮತ್ತು ಚಿನ್ನದ ಪದಕ ವಿಜೇತ ಚಿರಾಗ್ ತ್ಯಾಗಿ ಅವರನ್ನು ಗುಂಡಿಕ್ಕಿ ಕೊಂದ ಆರೋಪದ ಮೇಲೆ ಮತ್ತೊಬ್ಬ ಪ್ಯಾರಾ ಅಥ್ಲೀಟ್ ಅನ್ನು ಉತ್ತರ ಪ್ರದೇಶ ಘಾಜಿಯಾಬಾದ್ನಲ್ಲಿ ಬಂಧಿಸಲಾಗಿದೆ. ಇದೊಂದು ಸೇಡಿನ ಹತ್ಯೆ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಮುರಾದ್ನಗರದ ಬಸಂತ್ಪುರ ಸೇಥ್ಲಿ ಗ್ರಾಮದ ನಿವಾಸಿ 24 ವರ್ಷದ ತ್ಯಾಗಿ ಶನಿವಾರ ಘಾಜಿಯಾಬಾದ್ನ ಸಾಯಿ ಉಪವನ ಬಳಿ ಶವವಾಗಿ ಪತ್ತೆಯಾಗಿದ್ದರು.

ತ್ಯಾಗಿ ಇತ್ತೀಚೆಗೆ ಪುಣೆಯ ತರಬೇತಿ ಶಿಬಿರದಿಂದ ಹಿಂದಿರುಗಿ ಮೇ 29ರಂದು ದೆಹಲಿಗೆ ತಲುಪಿದ್ದರು ಎಂದು ಅವರ ಕುಟುಂಬ ತಿಳಿಸಿದೆ.

ಶನಿವಾರ ಬೆಳಿಗ್ಗೆ ಅವರು ಮಗನ ಜೊತೆ ಕೊನೆಯದಾಗಿ ಮಾತನಾಡಿದ್ದರು. ಮಧ್ಯಾಹ್ನ ಮನೆಗೆ ಬರುತ್ತೇನೆ ಎಂದು ಹೇಳಿದ್ದ ಮಗ ಶವವಾಗಿ ಪತ್ತೆಯಾಗಿದ್ದಾನೆ.

ಮೃತದೇಹದ ಪ್ರಾಥಮಿಕ ಪರೀಕ್ಷೆ ಮತ್ತು ಸ್ಥಳದಿಂದ ಸಂಗ್ರಹಿಸಿದ ಪುರಾವೆಗಳ ಅನ್ವಯ ತ್ಯಾಗಿ ಅವರನ್ನು ಗುಂಡಿಕ್ಕಿ ಕೊಂದಿರುವುದು ಗೊತ್ತಾಗಿದೆ ಎಂದು ಡಿಸಿಪಿ ಧವಲ್ ಜೈಸ್ವಾಲ್ ಹೇಳಿದ್ದಾರೆ.

ತ್ಯಾಗಿ ಜೊತೆ ತರಬೇತಿ ಪಡೆದಿದ್ದ ಯಶ್ ಖಾಟಿಕ್ ಎಂಬ ಪ್ಯಾರಾ ಅಥ್ಲೀಟ್ ಅನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ದಾಖಲೆ ಪರಿಶೀಲನೆ ವೇಳೆ ಖಾಟಿಕ್ ವಿರುದ್ಧ ತ್ಯಾಗಿ ದೂರು ನೀಡಿದ್ದರು. ಹೀಗಾಗಿ, ಖಾಟಿಕ್ ಅನರ್ಹಗೊಂಡಿದ್ದರು. ಇದರಿಂದ ಕೋಪಗೊಂಡ ಖಾಟಿಕ್ ಸೇಡಿನ ಹತ್ಯೆ ನಡೆಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಿಸ್ತೂಲ್ನಿಂದ ತ್ಯಾಗಿ ಮೇಲೆ ಗುಂಡು ಹಾರಿಸಿದ್ದಾಗಿ ಖಾಟಿಕ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಪಿಸ್ತೂಲ್ ಪತ್ತೆಗೆ ಪೊಲೀಸರ ತಂಡವನ್ನು ನಿಯೋಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.