ಹುಬ್ಬಳ್ಳಿ: ಬೆಂಗಳೂರಿನ ವೇಣುಗೋಪಾಲ ಜಯಚಂದ್ರ ಅವರು ಹುಬ್ಬಳ್ಳಿ ಸ್ಪೋರ್ಟ್ಸ್ ಶೂಟಿಂಗ್ ಅಕಾಡೆಮಿಯು ಕರ್ನಾಟಕ ರಾಜ್ಯ ಅಂಗವಿಕಲರ ಕ್ರೀಡಾ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ 3ನೇ ಶೂಟಿಂಗ್ ಚಾಂಪಿಯನ್‌ಷಿಪ್‌ನ ಏರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು.
ಇದೇ ವಿಭಾಗದ ಸ್ಪರ್ಧೆಯಲ್ಲಿ ಮೈಸೂರಿನ ಎಂ.ಎಸ್.ನಾಗೇಂದ್ರ ಬೆಳ್ಳಿ ಪದಕ, ಬೆಂಗಳೂರಿನ ಎಂ.ಆರ್.ಕಿರಣಕುಮಾರ ಕಂಚು ಜಯಿಸಿದರು.
ಫಲಿತಾಂಶ: ಏರ್ ರೈಫಲ್ ಪೀಪ್ ಸೈಟ್ ಸ್ಟ್ಯಾಂಡಿಂಗ್: ರಾಕೇಶ ನಿಡಗುಂದಿ (ಧಾರವಾಡ)–1, ಶಂಕರಲಿಂಗ ತವಳಿ (ಧಾರವಾಡ)–2. ಏರ್ ರೈಫಲ್ ಪೀಪ್ ಸೈಟ್ ಪ್ರೋನ್: ಜ್ಯೋತಿ ಸಣ್ಣಕ್ಕಿ (ಧಾರವಾಡ)–1, ಸಚಿನ್ ಸಿದ್ದಣ್ಣವರ (ಧಾರವಾಡ)–2. ಏರ್ ಪಿಸ್ತೂಲ್ (ಎನ್‌ಆರ್): ಅಜಯ್ (ಬೆಂಗಳೂರು)–1, ಕೇಶವ ತೆಲುಗು (ಧಾರವಾಡ)–2.
ಓಪನ್ ಸೈಟ್ ರೈಫಲ್ (ಪುರುಷ): ರಾಘವೇಂದ್ರ ಸುಂಕದ್ (ಧಾರವಾಡ)–1, ಎಚ್.ಕೊತ್ವಾಲ್ (ಬಾಗಲಕೋಟೆ)–2, ಮಲ್ಲಿಕಾರ್ಜುನ (ವಿಜಯಪುರ)–3. ಓಪನ್ ಸೈಟ್ ರೈಫಲ್ (ಮಹಿಳೆ): ಪ್ರತಿಭಾ ಮಾದರ (ಬಾಗಲಕೋಟೆ)–1, ಸಂಗಮ್ಮ ಆಲದಗಿಡದ (ಧಾರವಾಡ), ಯಲ್ಲವ್ವ ರಾಯಚೂರ (ಬಾಗಲಕೋಟೆ)–3.
ಟೂರ್ನಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 41 ಪ್ಯಾರಾ ಶೂಟರ್‌ಗಳು ಭಾಗವಹಿಸಿದ್ದರು ಎಂದು ಹುಬ್ಬಳ್ಳಿ ಸ್ಪೋರ್ಟ್ಸ್ ಅಕಾಡೆಮಿಯ ಮುಖ್ಯಸ್ಥ ರವಿಚಂದ್ರ ಬಾಲೆಹೊಸೂರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.